ಕ್ರೈಂದೇಶ-ವಿದೇಶಬೆಂಗಳೂರುರಾಜ್ಯವೈರಲ್ ನ್ಯೂಸ್

ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಸಾವು..! 15 ವರ್ಷಗಳಲ್ಲೇ ಈ ಬಾರಿ ದಾಖಲೆಯ ತಾಪಮಾನ ಏರಿಕೆ

258

ನ್ಯೂಸ್ ನಾಟೌಟ್: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಯಚ್ಚೂರಿನ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ರಾಯಚೂರಿನಲ್ಲಿ ಕಳೆದ 15 ವರ್ಷಗಳಲ್ಲೇ ಈ ಬಾರಿ ದಾಖಲೆಯ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಸರಾಸರಿ 46.7 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ.

ಹಸಮಕಲ್ ಮೂಲದ ಮಲ್ಲಯ್ಯ (45) ಬಿಸಿಲಿನ ತಾಪಕ್ಕೆ ಬಲಿಯಾದವರು ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಬೆಂಗಳೂರಿನಲ್ಲಿ (Bengaluru) ಕಾರ್ಯನಿರ್ವಹಿಸುತ್ತಿದ್ದ ಅವರು, ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಮನೆಗೆ ಬೇಕಾದ ಕಿರಾಣಿ ಸಾಮಾಗ್ರಿಗಳನ್ನು ತರಲು ತೆರಳಿದ್ದಾಗ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದಿದ್ದಾರೆ. ಸಾರ್ವಜನಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ದುರಾದೃಷ್ಟವಶಾತ್ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

See also  ಮನುಷ್ಯರು ತಮ್ಮ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗುವುದನ್ನು ನೋಡಿದ್ದೇವೆ ಆದ್ರೆ ಇಲ್ಲಿ ರಕ್ಷಣೆಗಾಗಿ ಜಿಂಕೆಯೊಂದು ಪೊಲೀಸ್ ಠಾಣೆಗೆ ಬಂದಿದೆ..! ಏನಿದು ಅಪರೂಪದ ಘಟನೆ? ನಡೆದದ್ರೂ ಎಲ್ಲಿ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget