Latestಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಯುವತಿ ಮೇಲೆ ಸರ್ಕಾರಿ ಬಸ್‌ ಹತ್ತಿಸಲು ಯತ್ನಿಸಿದ ಚಾಲಕ! ವಿಡಿಯೋ ವೈರಲ್ ಆದ ಬಳಿಕ ಚಾಲಕ ಅಮಾನತ್ತು..!

929

ನ್ಯೂಸ್ ನಾಟೌಟ್: ಬಿಎಂಟಿಸಿ ಚಾಲಕನೊಬ್ಬ ಯುವತಿ ಮೇಲೆಯೇ ಬಸ್‌ ಹತ್ತಿಸಲು ಯತ್ನಿಸಿರುವ ಘಟನೆ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ಬಳಿ ಮೇ 23ರ ಸಂಜೆ 5.40ಕ್ಕೆ ಈ ಘಟನೆ ನಡೆದಿತ್ತು. ಬಸ್‌ ನ ಹಿಂಬದಿಯಲ್ಲಿ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿಯಾಗಿತ್ತು. ಇದರಿಂದಾಗಿ ಬಿಎಂಟಿಸಿ ಬಸ್‌ ಚಾಲಕ ಪ್ರಶಾಂತ್‌ ಮತ್ತು ಯುವತಿ ನಡುವೆ ಗಲಾಟೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದು ಬಂದ ಯುವತಿ ಬಿಎಂಟಿಸಿ ಬಸ್‌ ಅನ್ನು ತಡೆದು ಚಾಲಕನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಳು. ಆದರೆ, ಈ ವೇಳೆ ಚಾಲಕ ಯುವತಿಯ ಮೇಲೆ ಬಿಎಂಟಿಸಿ ಬಸ್‌ ಹತ್ತಿಸಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಎಂಟಿಸಿ ಬಸ್‌ ಚಾಲಕನ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇನ್ನು, ಯುವತಿಯ ಮೇಲೆ ಬಸ್‌ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಕಬ್ಬನ್‌ಪಾರ್ಕ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಯುವತಿ ಮೇಲೆ ಬಿಎಂಟಿಸಿ ಬಸ್‌ ಹತ್ತಿಸಲು ಯತ್ನಿ ಸಿದ್ದ ಚಾಲಕ ಪ್ರಶಾಂತ್‌ ನನ್ನು ಅಮಾನತ್ತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ ಐ ಆರ್‌..! ಸುಹಾಸ್ ಶೆಟ್ಟಿ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಆರೋಪ..!

See also  ಮಂಗಳೂರು: ಗಲ್ಫ್ ಗೆ ತೆರಳಿದ್ದ ವಿಮಾನಗಳು ವಾಪಸ್..! ಉದ್ವಿಗ್ನತೆಯಿಂದ ವಾಯುಪ್ರದೇಶ ಬಂದ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget