ಜೀವನ ಶೈಲಿ/ಆರೋಗ್ಯರಾಜ್ಯ

ಜೂನ್ 14ಕ್ಕೆ ‘ಮಹಾ’ ರಕ್ತದಾನಿಗಳನ್ನು ಗುರುತಿಸುವ ಕಾರ್ಯಕ್ರಮ, 15ಕ್ಕಿಂತ ಹೆಚ್ಚು ಸಲ ರಕ್ತ ದಾನ ಮಾಡಿದ್ದರೆ ನಿಮಗೂ ಸಿಗಲಿದೆ ಅವಕಾಶ, ಏನಿದು ವಿಚಾರ..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ವಿಶ್ವ ರಕ್ತದಾನಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್ 14 ರಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಯಾದ್ಯಂತ ಇರುವ ರಕ್ತದಾನಿಗಳನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹದಿನೈದಕ್ಕಿಂದ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗುರುತಿಸಿ ಗೌರವಿಸುವಂತಹ ಕಾರ್ಯವನ್ನು ಮಾಡಲಾಗುತ್ತದೆ.

ಹೀಗಾಗಿ ಸುಳ್ಯದಲ್ಲಿ ಯಾರಾದರೂ 15ಕ್ಕಿಂತ ಹೆಚ್ಚು ಸಲ ರಕ್ತದಾನ ಮಾಡಿದ್ದವರಿದ್ದರೆ ಅಂತಹವರು ಸೂಕ್ತ ದಾಖಲೆಗಳೊಂದಿಗೆ ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲು ಕೋರಲಾಗಿದೆ. ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಮಿತಿಯ ಸಭಾಪತಿ ಪಿಬಿ ಸುಧಾಕರ್ ರೈ, ಗೌರವ ಕಾರ್ಯದರ್ಶಿ ತಿಪ್ಪೇಶಪ್ಪ, ಸಿಎ ಗಣೇಶ್ ಭಟ್ ಇವರುಗಳನ್ನು ಸಂಪರ್ಕಿಸಬಹುದಾಗಿದೆ. ದಾಖಲೆ ಸಲ್ಲಿಸಲು 12-6-2024 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ 94480 12141 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

Click 👇

https://newsnotout.com/2024/06/n-chandrababu-naidu-oath-delayed-for-political-reason
https://newsnotout.com/2024/06/loka-sabha-election-and-bjp-ministers-are-lost-thair-majority
https://newsnotout.com/2024/06/mangaluru-bhajaragadala-and-congress-issue-at-celebration
https://newsnotout.com/2024/06/x-tweeter-and-its-rules-on-users-kannada-news

Related posts

RTO ಬ್ರೋಕರ್ ಮನೆ ಮೇಲೆ ಲೋಕಾಯುಕ್ತ ದಾಳಿ..! ಎಂಟು ಜನ ಅಧಿಕಾರಿಗಳ ತಂಡದಿಂದ ದಾಖಲೆಗಳ ಹುಡುಕಾಟ

ಜಿಂದಾಲ್ ಕಾರ್ಖಾನೆಯಲ್ಲಿ ಭಾರೀ ದುರಂತ..! ನೀರಿನ ಹೊಂಡದಲ್ಲಿ ಬಿದ್ದು ಮೂರು ಕಾರ್ಮಿಕರು ಸಾವು..!

ಬ್ರಿಜೇಶ್ ಚೌಟ ಮತ್ತು ಪದ್ಮರಾಜ್ ನಡುವೆ ಪೈಪೋಟಿ, ದಕ್ಷಿಣ ಕನ್ನಡದಲ್ಲಿ ಮತದಾನ ನಡೆದು 40 ದಿನಗಳ ಕಾಯುವಿಕೆಗೆ ಇಂದಿಗೆ(ಜೂ.4) ಅಂತ್ಯ