ಕರಾವಳಿ

ಬೀದಿ ನಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಅಭಿಮಾನಿ ಸಂಘ, ಫ್ಲೆಕ್ಸ್ ವೈರಲ್

694

ಸಾಸ್ತಾನ: ಮನುಷ್ಯ ಇಹಲೋಕ ತ್ಯಜಿಸಿದಾಗ ಆತನ ಸವಿ ನೆನಪಿಗಾಗಿ ಆತನದ್ದೊಂದು ಫ್ಲೆಕ್ಸ್ ಹಾಕಿ ಶ್ರದ್ಧಾಂಜಲಿ ಅರ್ಪಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಗ್ರಾಮದ ಜನ ತಮ್ಮ ಬೀದಿಯನ್ನು ಕಾಪಾಡುತ್ತಿದ್ದ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಫ್ಲೆಕ್ಸ್ ಹಾಕಿ ಸುದ್ದಿಯಾಗಿದ್ದಾರೆ. ಈ ಫೋಟೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ಅಂದ ಹಾಗೆ ಈ ಶ್ವಾನದ ಹೆಸರು ಬ್ಲ್ಯಾಕಿ. ಉಡುಪಿ ಜಿಲ್ಲೆಯ ಸಾಸ್ತಾನ -ಪಾಂಡೇಶ್ವರದ ದಾರಿ ಹೋಕರ ಅಚ್ಚುಮೆಚ್ಚಿನ ಶ್ವಾನ. ಅಪರಿಚಿತರ ಪಾಲಿಗೆ ಸಿಂಹಸ್ವಪ್ನನಾಗಿದ್ದ ಬ್ಲ್ಯಾಕಿ ಇತ್ತೀಚೆಗೆ ನಿಧನವಾಗಿತ್ತು. ಸದಾ ಚುರುಕಾಗಿ ಇಡೀ ಬೀದಿಯನ್ನು ಕಾಯುತ್ತಿದ್ದ ಬ್ಲ್ಯಾಕಿಗೆ ಸುತ್ತಮುತ್ತಲಿನ ಜನರು ಅನ್ನ, ನೀರು ಕೊಟ್ಟು ಸಾಕಿದ್ದರು. ಇಡೀ ಬೀದಿಗೆ ರಾಜನಾಗಿ ಮೆರೆದಿದ್ದ ಬ್ಲ್ಯಾಕಿ ಸಾವಿನ ಸುದ್ದಿಯನ್ನು ಈಗಲೂ ಆ ಗ್ರಾಮದ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬ್ಲ್ಯಾಕಿ ಮೇಲಿನ ತಮ್ಮ ಅಭಿಮಾನ ಪ್ರೀತಿಯನ್ನು ತೋರಿಸುವುದಕ್ಕಾಗಿ ಅಲ್ಲಿನ ಜನ ಬ್ಲ್ಯಾಕಿಯ ಹೆಸರಲ್ಲಿ ಅಭಿಮಾನಿ ಸಂಘವನ್ನು ಕಟ್ಟಿಕೊಂಡು ಆ ಮೂಲಕ ಬ್ಲ್ಯಾಕಿ ದಿನ ನಿತ್ಯ ಓಡಾಡುತ್ತಿದ್ದ ಜಾಗದಲ್ಲಿಯೇ ಇಂತಹದ್ದೊಂದು ಫ್ಲೆಕ್ಸ್ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

See also  ಕಡಬ: ಚಲಿಸುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​ನಿಂದ ಬಿದ್ದು ವ್ಯಕ್ತಿ ದುರಂತ ಅಂತ್ಯ,ಮತ್ತೋರ್ವ ವ್ಯಕ್ತಿಗೆ ಗಾಯ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget