ಕ್ರೈಂ

ಮಹಿಳೆಯ ಜತೆ ರಾಸಲೀಲೆ, ಹಣಕ್ಕಾಗಿ ಬ್ಲ್ಯಾಕ್ ಮೈಲ್, ಗಂಡನಿಂದ ಪೊಲೀಸ್ ದೂರು

830

ಬಂಟ್ವಾಳ: ಸಂಬಂಧಿಕರ  ಮಹಿಳೆ ಜೊತೆ ರಾಸಲೀಲೆ ಮಾಡಿ ಬಳಿಕ  ಹಣಕ್ಕಾಗಿ ಬ್ಲ್ಯಾಕ್‌ಮೈಲ್ ಮಾಡುತ್ತಿದ್ದ ಕಾಮುಕನನ್ನು ಬಂಟ್ವಾಳ  ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಬಂಟ್ವಾಳ ಬಿ.ಕಸ್ಬಾ ಗ್ರಾಮದ ನಿತ್ಯಾನಂದ ನಗರದ ನಿವಾಸಿ ಮಹಿಳೆಯೋರ್ವಳ ನಗ್ನ ಪೋಟೋ ಗಳನ್ನು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಗಂಡ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ಬೆನ್ನು ಹತ್ತಿ ಆರೋಪಿಯನ್ನು ಬಂಧಿಸಿದಾಗ ಈತನ ಕಾಮಾದಾಟದ ಬಣ್ಣ ಬಯಲಾಗಿದೆ.

ಮಹಿಳೆಯ ನಗ್ನ ಪೋಟೋ ತೆಗೆದಿದ್ದ ಆರೋಪಿ ಕಳೆದ ಕೆಲ ದಿನಗಳಿಂದ 4.48 ಲಕ್ಷ ರೂ ನೀಡುವಂತೆ ಪೀಡಿಸುತ್ತಿದ್ದ, ಹಣ ನೀಡದಿದ್ದರೆ ಅಶ್ಲೀಲ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದ, ಅ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಪ್ ಮಾಡಿ ಸುಮ್ಮನಾಗಿದ್ದ.

ಬಳಿಕ ಮಹಿಳೆಯ ಗಂಡನ ಬಳಿ ಪೋಟೋ ತೋರಿಸಿ ಹಣ ನೀಡುವಂತೆ ಹೆದರಿಸಿ ಹೋಗಿ, ಎರಡು ದಿನಗಳ ಬಳಿಕ 17 ಜನ ಸಂಬಂಧಿಕರ  ಗ್ರೂಪ್ ಮಾಡಿ ಅದರಲ್ಲಿ ಸಂತ್ರಸ್ತ ಮಹಿಳೆಯ ಗಂಡನನ್ನು ಸೇರಿಸಿ ಅಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಗಂಡ ದೂರು ನೀಡಿದ್ದರು.

See also  ತಂದೆಯ ಜೊತೆಗಿನ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದೇನು? ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುದೇಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget