ರಾಜಕೀಯವೈರಲ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ವೋಟ್ ಕಮ್ಮಿ ಆಗುವ ಆತಂಕ..!, ಮಂಗಳೂರಿನಲ್ಲಿ ಇಂದು ರಾತ್ರಿ ಬಿ.ಎಲ್. ಸಂತೋಷ್ ಸಭೆ

ನ್ಯೂಸ್ ನಾಟೌಟ್: ಪ್ರತಿ ಸಲ ಚುನಾವಣೆ ಎದುರಿಸಿದಾಗಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮಲಕ್ಕೆ ಯಾವುದೇ ಭಯವಿರಲಿಲ್ಲ. ಆದರೆ ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಒಳಗೊಳಗೆ ಸ್ವಲ್ಪ ಆತಂಕ ಇದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಈ ವಿಚಾರ ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೋದು ಖಚಿತತೆ ಇಲ್ಲ. ಆದರೆ ಕಮಲ ಪಾಳಯದಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿರುವುದಂತೂ ನಿಜ.

ಈ ಎಲ್ಲ ವಿಚಾರ ಚರ್ಚೆಯ ನಡುವೆ ಮೋದಿ ಮಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ಬಳಿಕ ಬಿಜೆಪಿ ಭರ್ಜರಿಯಾಗಿ ಗೆಲ್ಲುತ್ತದೆ ಅನ್ನುವ ನಂಬಿಕೆ ಕೆಲವು ನಾಯಕರದ್ದಾಗಿದೆ. ಈ ಹಿಂದೆ ನಳಿನ್ ಕುಮಾರ್ ಕಟೀಲ್ ಸಂಸದರಾಗಿದ್ದಾಗ ಬಿಜೆಪಿ ಅನಾಯಾಸವಾಗಿ ಗೆದ್ದಿತ್ತು. ಆದರೆ ಈ ಸಲ ವಾತಾವರಣ ಹಾಗಿಲ್ಲ. ಹಾಗಂತ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಅನ್ನೋದಲ್ಲ. ಜನರು ಪ್ರಬುದ್ಧರಾಗಿ ಚಿಂತಿಸೋಕೆ ಆರಂಭಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಬರಲಿ, ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದಲಾವಣೆಯ ಶಕೆ ಶುರುವಾಗಿದೆ. ಸೌಜನ್ಯಳ ನ್ಯಾಯದ ಪರ ಯಾವೊಬ್ಬ ನಾಯಕನೂ ಧ್ವನಿ ಎತ್ತದೇ ಇರುವುದು ದೊಡ್ಡ ಮೈನಸ್ ಆಗುವುದಂತೂ ನಿಜ. ಈ ಹಿನ್ನೆಲೆಯಲ್ಲಿ ಸಾವಿರಾರು ವೋಟ್ ಗಳು ನೋಟಾಕ್ಕೆ ಬಿದ್ದರೆ ಬಿಜೆಪಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀಳಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಬಿಜೆಪಿಯೊಳಗಿನ ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳವೂ ಕೂಡ ಹಿನ್ನಡೆ ತರಬಹುದು ಎಂದೇ ಹೇಳಲಾಗುತ್ತಿದೆ. ಬಿಜೆಪಿ ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಗೆದ್ದರೂ ಕೂಡ ಹಿಂದಿನಷ್ಟು ಲೀಡ್ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಇದೆ ಎಂದೇ ಅಧ್ಯಯನ ವರದಿಗಳೇ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಮೋದಿ ರೋಡ್ ಶೋ ಮುಗಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಇಂದು (ಭಾನುವಾರ – ಏಪ್ರಿಲ್‌ 14) ರಾತ್ರಿ ಮಂಗಳೂರಿನಲ್ಲಿ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಬಿ.ಎಲ್. ಸಂತೋಷ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಸಂಘಟನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಭಾನುವಾರ ರಾತ್ರಿಯೇ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ನಿಖರವಾಗಿಲ್ಲ. ಸೋಮವಾರ (ಏಪ್ರಿಲ್‌ 15) ಉಡುಪಿಯಲ್ಲಿ ಸಭೆ ನಡೆಸಲಿರುವ ಬಿ.ಎಲ್. ಸಂತೋಷ್‌, ಪಕ್ಷ ಸಂಘಟನೆಗೆ ಬಗ್ಗೆ ವಿವರಗಳನ್ನು ಪಡೆಯಲಿದ್ದಾರೆ. ಇದರ ಜತೆಗೆ ಮಂಗಳೂರಿನಲ್ಲಿ ಮತ್ತೊಂದು ಸಂಘಟನಾತ್ಮಕ ಸಭೆಯನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Related posts

Prajwal Revanna ತಗ್ಲಾಕ್ಕೊಂಡೆ..! ಪ್ರಜ್ವಲ್ ಗೆ ಈಗ ಶುರುವಾಗಿದೆ ಅಸಲಿ ಸಂಕಷ್ಟ..! ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್..!

ಜಿಂದಾಲ್ ಕಾರ್ಖಾನೆಯಲ್ಲಿ ಭಾರೀ ದುರಂತ..! ನೀರಿನ ಹೊಂಡದಲ್ಲಿ ಬಿದ್ದು ಮೂರು ಕಾರ್ಮಿಕರು ಸಾವು..!

ರಾಮ ಮಂದಿರದ ಹೆಸರಲ್ಲಿನ ಸುಳ್ಳು ಸುದ್ದಿ ಮತ್ತು ವಂಚನೆಗಳ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು? ಈ ಬಗ್ಗೆ ನೋಟಿಸ್ ನಲ್ಲೇನಿದೆ..?