ದೇಶ-ಪ್ರಪಂಚರಾಜಕೀಯ

ರಾಮ ಮಂದಿರಕ್ಕೆ ಆಮಂತ್ರಣ ಕೊಡೋಕೆ ಇವರ್ಯಾರು ಎಂದು ಕೇಳಿದ ಬಿ ಕೆ ಹರಿಪ್ರಸಾದ್‌..! ನಾವು ಭೂತ, ದೆವ್ವ ಪೂಜೆ ಮಾಡೋರು, ಭೂತದ ಬಳಿಯೇ ಹೋಗುತ್ತೇವೆ ಎಂದದ್ದೇಕೆ..?

ನ್ಯೂಸ್ ನಾಟೌಟ್ : ದೇವರ ಕಾರ್ಯಕ್ರಮಕ್ಕೆ ಆಮಂತ್ರಣ-ಗೀಮಂತ್ರಣ ಬೇಡ. ಆದರೆ, ಅಲ್ಲಿ ಜಗದ್ಗುರು ಇಲ್ಲ.ಇರೋದು ವಿಶ್ವಗುರು. ಅದು ಬಿಜೆಪಿಯ ವಿಶ್ವಗುರು ನಡೆಸುತ್ತಿರೋ ರಾಜಕೀಯ ಕಾರ್ಯಕ್ರಮ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿ ಪ್ರಸಾದ್‌ ರಾಮಮಂದಿರ ಉದ್ಘಾಟನೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿ ಕೆ ಹರಿ ಪ್ರಸಾದ್‌, ದೇಶದಲ್ಲಿ ಮೊದಲು ಹೇಳಿಕೆ ನೀಡಿದ್ದೇ ನಾನು. ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿ ಕೊಟ್ಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ರೆ ಧಾರ್ಮಿಕ ಕಾರ್ಯಕ್ರಮ. ಶಂಕರಾಚಾರ್ಯರು ಹೋಗಿಲ್ಲ. ವಿಶ್ವಗುರು ಅಲ್ಲಿಗೆ ಹೋಗಿರೋದು. ವಿಶ್ವಗುರು ಜಗದ್ಗುರು ಅಲ್ಲ ಎಂದು ಹೇಳಿದ್ದಾರೆ.

ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು, ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ವಿರುದ್ಧ, ಇಬ್ಬರು ತಟಸ್ಥ. ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇಶದಲ್ಲಿ 33 ಕೋಟಿ ದೇವರಿದೆ, ಎಲ್ಲಾದ್ರು ಹೋಗ್ತೀವಿ. ದೇವರ ಬಳಿ ಹೋಗಬೇಕು, ಇಂತಾಹಾ ದೇವರ ಬಳಿಯೇ ಹೋಗಬೇಕಾ. ನಾವು ಭೂತ, ದೆವ್ವ ಪೂಜೆ ಮಾಡೋರು, ಭೂತದ ಬಳಿಯೇ ಹೋಗುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಅಧಿಕಾರಕ್ಕಾಗಿ ಬೇರೆ-ಬೇರೆ ಪಕ್ಷಗಳನ್ನ ಬದಲಾವಣೆ ಮಾಡೋನಲ್ಲ, ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ, ಅದಕ್ಕೆ ನಮ್ಮ ಅಸಮಾಧಾನ, ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ರಾಜ್ಯದ ಸಿಎಂ ಅವರ ಮೇಲೆ ಏಕೆ ಸಿಟ್ಟಾಗೋಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮಾತಿಗೆ ಕುಟುಕಿದ್ದಾರೆ.

https://newsnotout.com/2024/01/school-college-leave-dk-rama/

Related posts

ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋ ರೂ. ಘೋಷಿಸಿದ ಸ್ವಾಮೀಜಿ! ಈ ಬಗ್ಗೆ ಉದಯನಿಧಿ ಸ್ಟಾಲಿನ್‌ ಹೇಳಿದ್ದೇನು?

‘ನಟಿ ರಮ್ಯಾ ಹೃದಯಾಘಾತದಿಂದ ದುರಂತ ಅಂತ್ಯ ಕಂಡಿದ್ದಾರೆ’ ಎನ್ನುವ ಸುದ್ದಿ ಹರಿದಾಡಿದ್ದೇಕೆ? ನಟಿ ರಮ್ಯಾ ಅವರಿಗೆ ಏನಾಯ್ತು? ಆಪ್ತರು ಈ ಬಗ್ಗೆ ಹೇಳಿದ್ದೇನು?

ಶಾಲಾ- ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಎಂದು ಕರೆ ನೀಡಿದ್ಯಾರು? ಸಿಎಂ ತಮ್ಮ ಹೇಳಿಕೆಯ ಬಗ್ಗೆ ನೀಡಿದ ಸ್ಪಷ್ಟನೆಯೇನು?