ಕೊಡಗುಸುಳ್ಯ

ಪೆರಾಜೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಆಯ್ಕೆ, ಶಕ್ತಿ ಕೇಂದ್ರದ ಸಭೆಯಲ್ಲಿ ರಚನೆಯಾದ ಹೊಸ ತಂಡದಲ್ಲಿ ಯಾರೆಲ್ಲ ಇದ್ದಾರೆ..?

230

ನ್ಯೂಸ್ ನಾಟೌಟ್: ಪೆರಾಜೆ ಶಕ್ತಿ ಕೇಂದ್ರ ಇದರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಪೆರಾಜೆ ಪಂಚಾಯತ್ ಸಭಾಂಗಣದ ಭಾರತೀಯ ಶಕ್ತಿ ಕೇಂದ್ರದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

ಅಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ ಆಯ್ಕೆಯಾಗಿದ್ದಾರೆ. ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಮನ್ ಪೀಚೆಮನೆ , ಕಾರ್ಯದರ್ಶಿಗಳಾಗಿ ನೋಹಿತ್ ನಿಡ್ಯಮಲೆ ಆಯ್ಕೆಯಾದರು. ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಸುಭಾಷ್ ಚಂದ್ರ ಬಂಗಾರಕೋಡಿ , ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ, ಮಡಿಕೇರಿ ತಾಲೂಕು ಗ್ರಾಮಾಂತರ ಭಾ.ಜ.ಪ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸೇರಿದಂತೆ ಪಂಚಾಯತ್ ಸದಸ್ಯರುಗಳು ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು , ಸೇರಿದಂತೆ ವಿವಿಧ ಮೋರ್ಚಗಳ ಪದಾಧಿಕಾರಿಗಳು , ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಕಲ್ಲುಗುಂಡಿ: ಗಾಂಜಾ ಮತ್ತಿನಲ್ಲಿ ಯುವಕನ ಪುಂಡಾಟ..! ಎಲ್ಲೆ ಮೀರಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget