ಕರಾವಳಿಪುತ್ತೂರುರಾಜಕೀಯ

ಪುಣಚ: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

210

ನ್ಯೂಸ್ ನಾಟೌಟ್ ಪುತ್ತೂರು: ಪುಣಚದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ರೈ ಅವರು ಸೋಮವಾರ ಬಿರುಸಿನ ಮತ ಪ್ರಚಾರ ನಡೆಸಿದರು.

ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ಸಂದರ್ಭ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಅಶೋಕ ರೈ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ರಾಜೇಂದ್ರ ರೈ ಬೈಲಗುತ್ತು, ನಾರಾಯಣ ಪೂಜಾರಿ ನೀರ್ ಮಜಲು, ಕುಂಞಣ್ಣ ರೈ ಮಲ್ಲಿಕಟ್ಟೆ, ಜಾನು ನಾಯ್ಕ ನೀರ್ ಮಜಲು, ಸುಂದರ ಸಾಲಿಯಾನ್, ಚಿದಾನಂದ ಬೈಲಡ್ಕ, ಬಾಲಕೃಷ್ಣ ರೈ ಬೈಲಗುತ್ತು, ಮೋಹನ ತೋರಣಕಟ್ಟೆ, ವೆಂಕಪ್ಪ ತೋರಣಕಟ್ಟೆ ಸೇರ್ಪಡೆಯಾದರು. ಈ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂಎಸ್‌ ಮಹಮ್ಮದ್‌ ಮತ್ತಿತರರು ಉಪಸ್ಥಿತರಿದ್ದರು.

See also  ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget