ನ್ಯೂಸ್ ನಾಟೌಟ್: ಕರ್ನಾಟಕದ ವಿರೋಧ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಈ ವಾರದಲ್ಲಿ ಬದಲಾವಣೆ ಆಗಲಿದೆ ಎನ್ನಲಾಗಿದೆ. ಇದಕ್ಕೆ ದೆಹಲಿಯಿಂದಲೂ ಬಿಜೆಪಿ ಮುಖಂಡರಿಂದ ತಯಾರಿ ನಡೆದ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.
ಯತ್ನಾಳ್ ಬಣ ಮತ್ತು ವಿಜಯೇಂದ್ರ ಬಣವಲ್ಲದೇ, ತಟಸ್ಥ ಅಥವಾ ಸಮಾನಮನಸ್ಕ ಮುಖಂಡರು ಒಂದು ಕಡೆ ಸಭೆ ಸೇರಿದ್ದಾರೆ. ಈ ಸಭೆಯಲ್ಲಿ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಡಾ.ಸುಧಾಕರ್, ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ ಮುಂತಾದ ನಾಯಕರು ಭಾಗವಹಿಸಿದ್ದರು ಎನ್ನುವ ಮಾಹಿತಿಯಿದೆ.
ಈ ನಡುವೆ, ಮಾಜಿ ಸಿಎಂ ಮತ್ತು ಹಾವೇರಿ ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರೊಬ್ಬರನ್ನು ಭೇಟಿಯಾಗಿದ್ದ ಸುದ್ದಿ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಈ ಸುದ್ದಿ, ವೈರಲ್ ಆಗುತ್ತಿದ್ದಂತೆಯೇ ಅಶೋಕ್ ಇದಕ್ಕೆ ಸ್ಪಷ್ಟನೆಯನ್ನು ನೀಡಿ, ನಾನು ರಾಜ್ಯಾಧ್ಯಕ್ಷ ಹುದ್ದೆಗೆ ಅರ್ಜಿಯನ್ನು ಹಾಕಿಲ್ಲ. ವಿಪಕ್ಷದ ನಾಯಕನ ಜವಾಬ್ದಾರಿಯನ್ನು ವರಿಷ್ಠರು ನನಗೆ ನೀಡಿದ್ದಾರೆ, ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದರು.
ಅಶೋಕ್ ಅವರ ಈ ಸ್ಪಷ್ಟನೆಗೆ ಕಾರಣ ಇಲ್ಲದಿಲ್ಲ. ಮೂಲಗಳ ಪ್ರಕಾರ, ಬೊಮ್ಮಾಯಿ ಅವರು ಸಂಘದ ನಾಯಕರ ಜೊತೆಗಿನ ಮಾತುಕತೆಯ ವೇಳೆ, ಅವರು ಕೂಡಾ ವಿಜಯೇಂದ್ರ ಅವರನ್ನು ಕೆಳಗಿಳಿಸುವುದು ಉತ್ತಮ ಎನ್ನುವ ಮಾತನ್ನು ಆಡಿದ್ದರು ಎನ್ನಲಾಗಿದೆ. ಜೊತೆಗೆ, ಮೂವರು ನಾಯಕರು ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಲು ಸಮರ್ಥರು ಎನ್ನುವ ಮಾತನ್ನು ಆರ್ ಎಸ್ ಎಸ್ ನಾಯಕರ ಮುಂದೆ ಹೇಳಿದ್ದರು ಎಂದು ಸುದ್ದಿಯಾಗುತ್ತಿದೆ. ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮೂರು ಹೆಸರುಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
ಅವುಗಳೆಂದರೆ ವಿ.ಸೋಮಣ್ಣ, ಆರ್. ಅಶೋಕ್ ಮತ್ತು ಸಿ.ಟಿ.ರವಿ ಅವರ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ವರಿಷ್ಠರು ಯಾವ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಯೋಚನೆಯನ್ನು ಇಟ್ಟುಕೊಂಡಿದ್ದಾರೆ ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ ಎನ್ನುವ ಮಾತು ಚರ್ಚೆಯ ವೇಳೆ ಬಂದಿತ್ತು. ಈ ಬಗ್ಗೆ ಹಲವು ಚೆರ್ಚೆಗಳು ನಡೆಯುತ್ತಿದ್ದು ರಾಜ್ಯ ನಾಯಕರು ಒಬ್ಬೊಬ್ಬರಾಗಿ ದೆಹಲಿ ನಾಯಕರನ್ನು ಭೇಟಿ ಮಾಡಿ ಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
Click
ಲಿಂಕ್ ತೆರೆಯದಿದ್ದರೂ ವಾಟ್ಸ್ ಆ್ಯಪ್ ಖಾತೆಗಳು ಹ್ಯಾಕ್..? ಎಚ್ಚರಿಕೆ ನೀಡಿದ ವಾಟ್ಸ್ ಆ್ಯಪ್..!
ರಜೆ ನೀಡಲು ನಿರಾಕರಿಸಿದ್ದಕ್ಕೆ ಚೂರಿಯಿಂದ ಇರಿದ ಸರ್ಕಾರಿ ನೌಕರ..! ಇಬ್ಬರ ಸ್ಥಿತಿ ಗಂಭೀರ..!
ಮಗನ ಮೃತದೇಹ ಬೇಡವೆಂದು ಊರಿಗೆ ಹೊರಟ ತಾಯಿ..! ಕೇರಳದ ಕುಖ್ಯಾತ ಕಳ್ಳನ ಮೃತದೇಹ ಬೆಂಗಳೂರಿನಲ್ಲಿ ಪತ್ತೆ..!
ಎಷ್ಟೇ ಹೇಳಿದ್ರೂ ಆಕೆಯ ಸಹವಾಸ ಬಿಡದ ಪತಿ..! ಪತಿಯ ಕಾಲು ಮುರಿಯಲು 5 ಲಕ್ಷ ರೂ.ಗೆ ಸುಪಾರಿ ನೀಡಿದ ಪತ್ನಿ..!
‘ಎಟರ್ನಲ್’ ಎಂದು ಹೆಸರು ಬದಲಿಸಿಕೊಂಡ Zomato..! ಹೊಸ ಸೇವೆಗಳು ಸೇರ್ಪಡೆ..!
ಉಡುಪಿ: ಕಲ್ಲಿಗೆ ತಾಗಿ ಮೀನುಗಾರಿಕಾ ಬೋಟ್ ಮುಳುಗಡೆ..! ದೋಣಿಯ ಅಡಿಭಾಗ ಒಡೆದು ಒಳನುಗ್ಗಿದ ನೀರು..!