ಕ್ರೈಂ

ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿಧನ

590

ನ್ಯೂಸ್ ನಾಟೌಟ್: ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾಮಂದಿರದ ಮಾಲೀಕರಾಗಿರುವ ಡಾ.ನರೇಂದ್ರ ಕುಮಾರ್(45) ಅವರು ಧರ್ಮಸ್ಥಳ, ಕುಕ್ಕೆ ಭೇಟಿಗೆಂದು ಬಂದ ವೇಳೆ ಧರ್ಮಸ್ಥಳದಲ್ಲಿ ನಿಧನರಾಗಿದ್ದಾರೆ.

ಪತ್ನಿ ,ಮಕ್ಕಳು ಸೇರಿ ಒಟ್ಟು ಏಳು ಜನರು ಧರ್ಮಸ್ಥಳ ಸನ್ನಿಧಿ ಗೆಸ್ಟ್ ರೂಂ ನಲ್ಲಿದ್ದರು. ಧರ್ಮಸ್ಥಳ ಕ್ಷೇತ್ರ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಪಡೆದು ವಾಪಾಸ್ ಬೆಂಗಳೂರಿಗೆ ಹೋಗುವುದಾಗಿ ನಿರ್ಧರಿಸಿದ್ದರು. ಮೃತರು ಪತ್ನಿ ಸಂದರ್ಶಿನಿ ಮತ್ತು ಇಬ್ಬರು ಮಕ್ಕಳಾದ ಪ್ರಜ್ವಲ್ ಮತ್ತು ಕಶಿಕಾ ರನ್ನು ಅಗಲಿದ್ದಾರೆ . ಬೆಳಿಗ್ಗೆ ಏಕಾಏಕಿ ಡಾ.ನರೇಂದ್ರ ಕುಮಾರ್ ಗೆ ಎದೆನೋವು ಕಾಣಿಸಿಕೊಂಡು ಕೂಡಲೇ ಟಿಟಿ ಚಾಲಕನಿಗೆ ಮಕ್ಕಳು ಕರೆ ಮಾಡಿ ವಿಷಯ ತಿಳಿಸಿದಾಗ ಗೆಸ್ಟ್ ಹೌಸ್ ಗೆ ಚಾಲಕ ವಾಹನ ತಂದಾಗ ನಡೆದುಕೊಂಡೆ ಬಂದು ವಾಹನ ಹತ್ತಿದ್ದಾರೆ. ನೇತ್ರಾವತಿ ಬಳಿ ಬರುತ್ತಿದ್ದಾಗ ವಾಹನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕಾಲ್ತುಳಿತ ಪ್ರಕರಣ: ವಿರಾಟ್ ಕೊಹ್ಲಿ ವಿರುದ್ದವೂ ಎಫ್‌ ಐಆರ್‌ ದಾಖಲಿಸುವಂತೆ ದೂರು..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget