ಕರಾವಳಿಪುತ್ತೂರುರಾಜಕೀಯ

ಮೇ 1ರಂದು ಪುತ್ತೂರಲ್ಲಿ ಎಸ್.ಸಿ. ಸಮಾವೇಶ

262

ಪುತ್ತೂರು ನ್ಯೂಸ್ ನಾಟೌಟ್: ಕ್ಷೇತ್ರದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ನೋಡಿಕೊಂಡು ಜನರು ಮತ ಚಲಾಯಿಸಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮೇ 1ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಶನ್ ಸಭಾಂಗಣದಲ್ಲಿ ಎಸ್. ಸಿ ಸಮಾವೇಶ ನಡೆಯಲಿದೆ ಎಂದು ಎಸ್. ಸಿ. ಮೋರ್ಚಾ ಜಿಲ್ಲಾ ಸದಸ್ಯ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡ್ ಪುತ್ತೂರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನರು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿಯಂತಹ ಯೋಜನೆ ಮತ್ತು ಹಲವಾರು ಜನಪರ ಯೋಜನೆಗಳನ್ನು ಕೊಟ್ಟು ಎಲ್ಲರ ಮನಸ್ಸಿನಲ್ಲಿ ಕರ್ನಾಟಕದ ಪ್ರತಿಯೊಬ್ಬರ ಪ್ರೀತಿಗೆ ಕಾರಣರಾಗಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಸುಕನ್ಯ ಸಮೃದ್ಧಿ ಯೋಜನೆ, ಎಲ್ಲ ಸಮುದಾಯಕ್ಕೂ ಮನೆ, ನೀರು, ಬೆಳಕು, ಶೌಚಾಲಯ ಇಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಗೃಹ ನಿರ್ಮಾಣದ ಮೊತ್ತವನ್ನು 2,10,000 ರೂಪಾಯಿಗೆ ಏರಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಹಲವಾರು ಮಂದಿಗೆ ನೆರವಾಗಿದೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ 75 ಯೂನಿಟ್ ವಿದ್ಯುತ್ ಉಚಿತ ಯೋಜನೆ. PEMGP ಲೋನ್‌ನಲ್ಲಿ ಪರಿಶಿಷ್ಟ ಜಾತಿ ಮಹಿಳೆಯರಿಗೆ ಶೇ.30 ಸಹಾಯಧನ, ಪರಿಶಿಷ್ಟ ಜಾತಿ ಸಮುದಾಯದ ಶಾಲೆಗಳಿಗೆ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ನಾಮಕರಣ. ರಾಜ್ಯದಲ್ಲಿ ಒಟ್ಟು 68 ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ. ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15ರಿಂದ 17ವರೆಗೆ ಹೆಚ್ಚಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಅವರು 1500 ಕೋಟಿ ರೂ. ಅನುದಾನ ಮತ್ತು ಪ್ರತಿವರ್ಷ ಡಾ. ಬಿ. ಆರ್. ಅಂಬೇಡ್ಕರ್ ನಿಗಮದಿಂದ 25 ಕೊಳವೆ ಬಾವಿ ಮತ್ತು ಮಹಿಳೆಯರಿಗೆ ನಿಗಮದಿಂದ ಸಹಾಯಧನ ನೀಡಲಾಗಿದೆ ಎಂದು ಅಣ್ಣಪ್ಪ ಕಾರೆಕ್ಕಾಡ್ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೊರಗಪ್ಪ ಈಶ್ವರಮಂಗಲ, ಲೋಹಿತ್ ಅಮಚಿ ನಡ್ಕ ಸುದ್ದಿಗೋಷ್ಠಿಯಲ್ಲಿದ್ದರು.

See also  ಆಂಧ್ರಕ್ಕೆ 4 ಆನೆಗಳನ್ನು ಕಳುಹಿಸಿದ ಕರ್ನಾಟಕ ಸರ್ಕಾರ ..! ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮೂಲಕ ಹಸ್ತಾಂತರ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget