ಕರಾವಳಿಕಾಸರಗೋಡುಪುತ್ತೂರು

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆಯುವರೇ ಅರುಣ್ ಕುಮಾರ್ ಪುತ್ತಿಲ, ಸಾವಿರಾರು ಕಾರ್ಯಕರ್ತರ ಸಭೆ, ಬಂಡಾಯದ ಬಿಸಿ?

308

ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಗೆ ಸಂಬಂಧಪಟ್ಟಂತೆ ಈಗ ಬಿಜೆಪಿಯೊಳಗೆ ಭಾರೀ ಅಸಮಾಧಾನದ ಹೊಗೆ ಎದ್ದಿದೆ.

ಟಿಕೇಟ್ ಸಿಗದೆ ನಿರಾಶೆಗೆ ಒಳಗಾಗಿರುವ ಹಿಂದೂ ಸಂಘಟನೆಯ ಪ್ರಮುಖ ನಾಯಕ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾತಿಗೆ ಪುಷ್ಠಿ ನೀಡುವಂತೆ ಪುತ್ತೂರಿನಲ್ಲಿ ಏ.12ರಂದು ಸಂಜೆ 6 ಗಂಟೆಗೆ ಕೊಟೆಚಾ ಸಭಾಂಗಣದಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ನಡೆದಿದೆ. ಸಾವಿರ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಂಡಾಯದ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

See also  ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಪದವಿ ಪ್ರದಾನ ಕಾರ್ಯಕ್ರಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget