ರಾಜಕೀಯವೈರಲ್ ನ್ಯೂಸ್

ಕಾವು: ಬಿಜೆಪಿಗೆ ಗುಡ್ ಬೈ ಹೇಳಿ ‘ಕೈ’ ಹಿಡಿದ ಬಿಜೆಪಿ ಕಾರ್ಯಕರ್ತರು, ಪದ್ಮರಾಜ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

247

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಈ ನಡುವೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರು ಕಮಲಪಾಳಯವನ್ನು ತೊರೆದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಗೋವಿಂದ ಪಾಟಾಳಿ ಕುರಿಂಜ, ಕಿರಣ್ ಗೌಡ ಕುರಿಂಜ ಮತ್ತು ಶಶಿಕಿರಣ ಪಾಟಾಳಿ ಕಾವು ಕಾಂಗ್ರೆಸ್ ಪಕ್ಷವನ್ನು ಸೇರಿದವರಾಗಿದ್ದಾರೆ. ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ಬ್ಲಾಕ್ ಅಧ್ಯಕ್ಷಎಂ ಬಿ ವಿಶ್ವನಾಥ ರೈ, ಡಾ. ರಾಜಾರಾಂ ಕೆ ಬಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ ಪಕ್ಷಕ್ಕೆ ಬರಮಾಡಿಕೊಂಡರು.‌ ವೇದಿಕೆಯಲ್ಲಿ ಪಕ್ಷದ‌ ಮುಖಂಡರಾದ ಮಹಮದ್ ಬಡಗನ್ನೂರು,ವಲಯ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ, ಚುನಾವಣಾ ಉಸ್ತುವಾರಿ ಫಾರೂಕ್ ಬಾಯಬ್ಬೆ, ಇಸಾಕ್ ಸಾಲ್ಮರ, ಇಕ್ಬಾಲ್ ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.

See also  ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಬ್ಬ ಯುವಕನಿಂದ ದೂರು, ಮತ್ತೊಂದು ಎಫ್.ಐ.ಆರ್ ದಾಖಲು..! ಅಂದು ಸೂರಜ್‌ ಪರ ದೂರು ಕೊಟ್ಟಿದ್ದವನೇ ಇಂದು ತಿರುಗಿಬಿದ್ದದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget