Latestಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ಪಕ್ಷದ ಕಚೇರಿಯಲ್ಲಿ ಮುಖಂಡನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ..! ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುಖಂಡನಿಗೆ ನೋಟಿಸ್..!

1k

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಮಹಿಳೆಯೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಮುಖಂಡನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪಕ್ಷ ಕಳಂಕಿತ ಮುಖಂಡನಿಗೆ ನೋಟಿಸ್ ನೀಡಿದೆ.

ಪಕ್ಷದ ಕಾರ್ಯಕರ್ತರು ಈ ವಿಡಿಯೊವನ್ನು ನಾಚಿಕೆಗೇಡು ಎಂದು ಆರೋಪಿಸಿ, ಬಿಜೆಪಿ ಮುಖಂಡರಿಗೆ ದೂರು ನೀಡಿದ್ದರು. ಬಿಜೆಪಿ ಜಿಲ್ಲಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್, ಈ ಘಟನೆ ಬಗ್ಗೆ ಏಳು ದಿನಗಳ ಒಳಗಾಗಿ ವಿವರಣೆ ನೀಡಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಿಂದ ಪಕ್ಷದ ಘನತೆಯ ಮೇಲೆ ಋಣಾತ್ಮಕ ಪರಿಣಾಮ ಎದುರಾಗುತ್ತಿದ್ದು, ಇದು ಅಶಿಸ್ತು ಎಂಬುದಾಗಿ ಪರಿಗಣಿಸಲ್ಪಡುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ ಶುಕ್ಲ ನೋಟಿಸ್ ನಲ್ಲಿ ವಿವರಿಸಿದ್ದಾರೆ. ಅಧ್ಯಕ್ಷರ ಸೂಚನೆ ಮೇರೆಗೆ ಈ ನೋಟಿಸ್ ನೀಡಲಾಗುತ್ತಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ವಿವರಣೆ ನೀಡದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಏಪ್ರಿಲ್ 12ರಂದು ಈ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಅಸ್ವಸ್ಥತೆ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಮಹಿಳೆ ಜಾಗ ಕೇಳಿದ್ದರು ಎನ್ನುವುದು ಕಶ್ಯಪ್ ವಿವರಣೆ. ಆಕೆಯ ಮನವಿ ಮೇರೆಗೆ ಕಾರಿನಲ್ಲಿ ಕಚೇರಿಗೆ ಕರೆತಂದಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾರಿನಲ್ಲಿ ಕಚೇರಿ ಎದುರು ಬಂದಿಳಿದ ಮಹಿಳೆಯ ಜತೆಗಿದ್ದ ಮುಖಂಡ ಆಕೆಯ ಭುಜದ ಮೇಲೆ ಕೈಹಾಕಿಕೊಂಡು ತೆರಳುತ್ತಿರುವ ಹಾಗೂ ಆಕೆಯನ್ನು ಆಲಂಗಿಸಿಕೊಂಡಿರುವುದು ಸಿಸಿಟಿವಿ ವಿಡಿಯೊದಲ್ಲಿ ದಾಖಲಾಗಿದೆ.

ಮುಂದಿನ 5 ದಿನ ದ.ಕ. ಜಿಲ್ಲೆಗೆ ರೆಡ್ ಅಲರ್ಟ್..! ಮುನ್ನೆಚ್ಚರಿಕಾ ಕ್ರಮವಾಗಿ ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ತಂಡ ಆಗಮನ

See also  ಪ್ರಿಯತಮೆಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಪ್ರಕರಣದ ಬಗ್ಗೆ ಸತ್ಯ ಬಿಚ್ಚಿಟ್ಟ ಎಸ್ಪಿ..! ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆದ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget