ದೇಶ-ಪ್ರಪಂಚ

ಮಹಿಳೆಯರು ಕತ್ತಲಾದ ಮೇಲೆ ಪೊಲೀಸ್ ಠಾಣೆಗೆ ಹೋಗಬೇಡಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ವಿಚಿತ್ರ ಸಲಹೆ

ಲಖನೌ: ಕತ್ತಲಾದ ಮೇಲೆ ಮಹಿಳೆಯರು ಪೊಲೀಸ್ ಠಾಣೆಗೆ ಹೋಗದಂತೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ವಿಚಿತ್ರ ಸಲಹೆ ನೀಡಿದ್ದಾರೆ. ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಬೇಬಿ ರಾಣಿ, ಶುಕ್ರವಾರ ಸಂಜೆ ವಾರಾಣಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಥ ಸಲಹೆ ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಇರುತ್ತಾರಾದರೂ ಸಂಜೆ ಐದರ ನಂತರ ಮಹಿಳೆಯರು ಅಲ್ಲಿಗೆ ಹೋಗದಿರುವುದೇ ಒಳ್ಳೆಯದು. ಪೊಲೀಸ್ ಠಾಣೆಗೆ ಹೋಗಲೇಬೇಕಿದ್ದರೆ ಅಣ್ಣ, ಅಪ್ಪ, ಪತಿ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.  ಈ ಹೇಳಿಕೆಯಿಂದ ಸಾರ್ವಜನಿಕವಾಗಿ ಬಿಜೆಪಿ ಪಕ್ಷವು ಮುಜುಗರಕ್ಕೀಡಾಗಿದೆ. ಇದರೊಂದಿಗೆ, ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗೆಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ.

Related posts

ಕಿರುಕುಳಕ್ಕೊಳಗಾದ ಪತ್ನಿಯಿಂದ ಪೊಲೀಸ್ ಸಹಾಯವಾಣಿಗೆ ಕರೆ! ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಕಿ-ಟಾಕಿ ಕಸಿದುಕೊಂಡ ಪತಿ!

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ

ಮಾಂಸಪ್ರಿಯರಿಗೆ ಸಿಹಿಸುದ್ದಿ..! ಮಾರುಕಟ್ಟೆಗೆ ಬರಲಿದೆ ಮಾಂಸಾಹಾರಿ ಅಕ್ಕಿ..! ವಿಜ್ಞಾನಿಗಳಿಂದ ತಯಾರಾದ ಮಾಂಸಾಹಾರಿ ಅಕ್ಕಿ,ಇನ್ನು ಬಿರಿಯಾನಿಗೆ ಮಾಂಸ ಬೇಡ ಈ ಅಕ್ಕಿಯೊಂದಿದ್ರೆ ಸಾಕು..!