Latestಕ್ರೈಂದೇಶ-ವಿದೇಶರಾಜಕೀಯ

ಮದುವೆ ಪಾರ್ಟಿಯಲ್ಲಿ ಯುವತಿ ಜೊತೆ ಶಾಸಕನ ಅಶ್ಲೀಲ ಕೃತ್ಯ ವೈರಲ್..! ವಿಡಿಯೋ ಬಗ್ಗೆ ಶಾಸಕ ಹೇಳಿದ್ದೇನು..?

5.4k

ನ್ಯೂಸ್ ನಾಟೌಟ್: ಬಿಜೆಪಿಯ ಹಿರಿಯ ನಾಯಕನೊಬ್ಬ ತನ್ನ ಅಶ್ಲೀಲ ವರ್ತನೆಯಿಂದ ಇದೀಗ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಹಿರಿಯ ಬಿಜೆಪಿ ನಾಯಕ ಮತ್ತು ರಾಸ್ರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಬ್ಬನ್ ಸಿಂಗ್ ರಘುವಂಶಿ ಎಂಬವರ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ, ಬಬ್ಬನ್ ಸಿಂಗ್ ವಿವಾಹ ಸಮಾರಂಭದಲ್ಲಿ ಮಹಿಳಾ ನರ್ತಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಈ ವಿಡಿಯೋ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ವೈರಲ್ ಆಗಿರುವ ವಿಡಿಯೋ ಸುಮಾರು 20-25 ದಿನಗಳ ಹಳೆಯದು ಎಂದು ಹೇಳಲಾಗಿದ್ದು, ಇದು ಬಿಹಾರದ ವಿವಾಹ ಸಮಾರಂಭದ ವಿಡಿಯೋ ಎನ್ನಲಾಗಿದೆ.

ಇದರಲ್ಲಿ, ಬಬ್ಬನ್ ಸಿಂಗ್ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಅಶ್ಲೀಲ ಕೃತ್ಯಗಳನ್ನು ಮಾಡುವುದನ್ನು ಕಾಣಬಹುದು. ಈ ವಿಡಿಯೋ ಬಿಡುಗಡೆಯಾದ ನಂತರ, ಬಲ್ಲಿಯಾದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಶಾಸಕ ಬಬನ್ ಸಿಂಗ್ ರಘುವಂಶಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಬಬ್ಬನ್ ಸಿಂಗ್ ಇದನ್ನು ಬನ್ಸ್‌ ದಿಹ್ ಶಾಸಕ ಕೇತ್ಕಿ ಸಿಂಗ್ ಅವರ ಬೆಂಬಲಿಗರ ಪಿತೂರಿ ಎಂದು ಕರೆದಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಕೇತ್ಕಿ ಸಿಂಗ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.  

ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಸುಟ್ಟು ಕರಕಲಾದ ಸ್ಲೀಪರ್‌ ಬಸ್‌..! ಗುರುತೂ ಸಿಗದಂತೆ 5 ಮಂದಿ ಸಜೀವ ದಹನ..!

ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ಮನೆಗಳಿಗೆ ದಿಢೀರ್ ಪೊಲೀಸ್ ದಾಳಿ..! 52 ರೌಡಿಶೀಟರ್ ಗಳ ಮನೆ ಪರಿಶೀಲನೆ..!

See also  ಮಹಿಳೆ 18 ಮಕ್ಕಳಿಗೆ ಜನ್ಮ ನೀಡುತ್ತಾಳೆಂದು ಭಾವಿಸಿದ್ದರು, ಬಳಿಕ ಏನಾಯ್ತು?ಏನದು ಭಯಾನಕ ಸತ್ಯ!!
  Ad Widget   Ad Widget   Ad Widget   Ad Widget   Ad Widget   Ad Widget   Ad Widget