ಕ್ರೈಂರಾಜಕೀಯವೈರಲ್ ನ್ಯೂಸ್

ತಡರಾತ್ರಿ ಬಿಜೆಪಿ ಸಂಸದನಿಗೆ ಅಶ್ಲೀಲ ವಿಡಿಯೋ ಕಾಲ್ ಮಾಡಿದ ಯುವತಿ, ಹಣ ಸುಲಿಗೆಗೆ ಯತ್ನ ನಡೆಸಿದ್ದಾಕೆ ಯಾರು?

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ ಮೂಲಕ ಅಪರಿಚಿತ ವ್ಯಕ್ತಿಗಳು ಮೆಸೇಜ್ ಕಳಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಬೆನ್ನಲ್ಲೇ ಬಿಜೆಪಿ ಸಂಸದರೊಬ್ಬರಿಗೂ ಯುವತಿಯೊಬ್ಬಳು ಅಶ್ಲೀಲ ವಿಡಿಯೋ ಕರೆ ಮಾಡಿರುವ ಘಟನೆ ನಡೆದಿದೆ.
ಹಾಲಿ ದಾವಣಗೆರೆ ಲೋಕಸಭಾ ಸಂಸದ ಹಿರಿಯ ಬಿಜೆಪಿ ನಾಯಕ ಜಿ.ಎಂ.ಸಿದ್ದೇಶ್ವರ್ ಅವರಿಗೆ ವಾಟ್ಸಾಪ್ ವಿಡಿಯೋ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ ಹಣ ಸುಲಿಗೆಗೆ ಯತ್ನ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ.
ಈ ಸಂಬಂಧಪಟ್ಟಂತೆ ತಕ್ಷಣ ಸಂಸದರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ಆನ್‌ಲೈನ್ ಮೂಲಕ ಜನರನ್ನು ದೋಚುವ ಬೆತ್ತಲೆ ಗ್ಯಾಂಗ್ ಪತ್ತೆಗೆ ಪೊಲೀಸರು ಈಗ ಬಲೆ ಬೀಸಿದ್ದಾರೆ.

ಜು.20 ರಂದು ರಾತ್ರಿ 10.16 ಕ್ಕೆ ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ಅವರಿಗೆ ಹೌ ಆರ್‌ ಯೂ ಎಂದು ಅನಾಮದೇಯ ವಾಟ್ಸಾಪ್ ಮೆಸೇಜ್ ಬಂದಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿರಲಿಲ್ಲ.
ನಂತರ ತಡರಾತ್ರಿ ಮತ್ತೆ ಅವರಿಗೆ ಅದೇ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಬಂದಿದೆ. ಅಪರಿಚಿತ ಮಹಿಳೆ ಹಿಂದಿಯಲ್ಲಿ ಮಾತನಾಡಿದ್ದಾಳೆ. ಆಗ ಹಿಂದಿಯಲ್ಲಿ ಆಕೆಯನ್ನು ವಿಚಾರಿಸಿ ಯಾರು ನೀನು ಎಂದು ಪ್ರಶ್ನೆ ಮಾಡಿದಾಗ ಆಕೆ ತಕ್ಷಣವೇ ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ದಾಳೆ. ಆಗ ಸಂಸದರು ಕರೆಯನ್ನು ಕಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಎನ್‌ ಕೌಂಟರ್‌ ಸ್ಪೆಷಲಿಸ್ಟ್ ಅಧಿಕಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೇಕೆ ಕೋರ್ಟ್..? 12 ಪೊಲೀಸರನ್ನು ಸಮವಸ್ತ್ರ ಧರಿಸಿದ ಅಪರಾಧಿಗಳು ಎಂದ ಹೈಕೋರ್ಟ್..!

ಫೇಸ್‌ ಬುಕ್‌ ಲೈವ್‌ ಬಂದು ಪತ್ನಿಯನ್ನು ಕೊಂದಿದ್ದ ಆರೋಪಿಗೆ ವಿಚಿತ್ರ ಸಾವು..! ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಡೆಯಿತಾ ಅನಾಹುತ..?

ಡ್ರೈವಿಂಗ್ ಕಲಿಯುವಾಕೆಯ ಅವಾಂತರ! ಪಾರ್ಕ್‌ ಮಾಡಿದ್ದ ಬೈಕ್‌ಗಳ ಮೇಲೆ ಕಾರು..! ವಿಡಿಯೋ ವೈರಲ್