ಕ್ರೈಂರಾಜಕೀಯವೈರಲ್ ನ್ಯೂಸ್

ಬಿಜೆಪಿ ನಾಯಕರನ್ನು ಹತ್ಯೆ ಮಾಡಿದ್ದೇಕೆ ಮಾವೋವಾದಿಗಳು..? ಇಬ್ಬರು ಮುಖಂಡರ ಕೊಲೆಯ ಹಿಂದಿನ ರಹಸ್ಯವೇನು? ದುರ್ಗಾ ಮೂರ್ತಿ ಪ್ರತಿಷ್ಠಾಪನೆಗೆ ನಕ್ಸಲರು ವಿರೋಧಿಸಿದ್ದೇಕೆ?

ನ್ಯೂಸ್ ನಾಟೌಟ್ : ನಕ್ಸಲೀಯರು ದಾಳಿ ಮಾಡುವ ಮೂಲಕ ಭೀತಿ ಹುಟ್ಟಿಸಿದ್ದು, ರಾಜ್ಯದಲ್ಲಿ ಎಲ್ಲ ನಿರ್ಬಂಧಗಳ ನಡುವೆಯೂ ನಕ್ಸಲೀಯರು ಬಿಜೆಪಿ ನಾಯಕ ರತನ್ ದುಬೆಯನ್ನು ಕೊಂದ ಘಟನೆ ಛತ್ತೀಸ್‌ಗಢದಲ್ಲಿ ಚುನಾವಣೆಗೂ ಮುನ್ನ ನಡೆದಿದೆ.

ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ರತನ್ ದುಬೆಯನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲು ಕೌಶಲನರ್ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಈ ದಾಳಿ ನಡೆದಿದೆ. ಈ ವೇಳೆ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ.

ರತನ್ ದುಬೆ ಕೌಶಲ್ ನಾರ್ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ನಕ್ಸಲೀಯರು ಕೊಂದಿದ್ದಾರೆ. ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ನಡುವೆ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ನಕ್ಸಲೀಯರ ಮೇಲೆ ತೀವ್ರ ನಿಗಾ ಇಡಲಾಗಿದೆ. ಚುನಾವಣಾ ಪ್ರಚಾರದ ವೇಳೆ ನಕ್ಸಲೀಯರು ರಾಜಕೀಯ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಕೆಲವು ದಿನಗಳ ಹಿಂದೆ ಮೊಹ್ಲಾ-ಮಾನ್ಪುರ್-ಅಂಬಗಢ ಚೌಕಿ ಜಿಲ್ಲೆಯ ಔಂಧಿ ಪ್ರದೇಶದ ನಕ್ಸಲ್ ಪೀಡಿತ ಗ್ರಾಮ ಸರ್ಖೇಡಾದಲ್ಲಿ ಬಿಜೆಪಿ ಮುಖಂಡ ಬಿರ್ಜುರಾಮ್ ತಾರಾಮ್ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದುರ್ಗಾಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾಳಿ ನಡೆದಿತ್ತು.

ಈ ದಾಳಿಗೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ದುರ್ಗಾ ಮೂರ್ತಿ ಪ್ರತಿಷ್ಠಾಪನೆಯನ್ನು ನಕ್ಸಲೀಯರು ವಿರೋಧಿಸಿದ್ದರು ಎಂದು ಹೇಳಲಾಗಿದೆ. ಆದರೆ ಬಿರ್ಜುರಾಮ್ ಇದಕ್ಕೆ ಒಪ್ಪಲಿಲ್ಲ, ಅವರು ದುರ್ಗಾ ಪೂಜೆಯನ್ನು ಪ್ರಾರಂಭಿಸಿದರು. ಹೀಗಾಗಿ ಅವರ ಮೇಲೆ ನಕ್ಸಲೀಯರು ದಾಳಿ ಮಾಡಿದರು. ಆಯುಧಗಳೊಂದಿಗೆ ಕೆಲವರು ಮನೆಗೆ ನುಗ್ಗಿ ಈ ಹತ್ಯೆ ನಡೆಸಿದ್ದರು ಎಂದು ವರದಿ ತಿಳಿಸಿದೆ.

Related posts

ರಾತ್ರಿ ಊಟ ಮಾಡಿ ಮಲಗಿದ ನಾಲ್ವರು ಮೇಲೇಳಲಿಲ್ಲ..! ಕೆಲಸಕ್ಕಾಗಿ ದೂರದೂರಿನಿಂದ ಬಂದವರ ನಿಗೂಢ ಅಂತ್ಯಕ್ಕೆ ಕಾರಣವೇನು?

7 ವರ್ಷದ ಬಾಲಕಿಯನ್ನು ಕೊಂದ ಮಲತಾಯಿ! ಬಕೆಟ್‌ನಲ್ಲಿ ಹಾಕಿ ಶವ ಎಸೆದ ಕ್ರೂರಿ!

ಮಗುವನ್ನು ಗಾಯಗೊಳಿಸಿ ಚರ್ಮರೊಗವೆಂದು ಸುಳ್ಳು ಹೇಳಿದ್ದ ಆಸ್ಪತ್ರೆ ಸಿಬ್ಬಂದಿ..! ಭಾರೀ ಮೊತ್ತದ ದಂಡ ಕಟ್ಟಲು ಆದೇಶ..! ಪ್ರಕರಣ ಬಯಲಾದದ್ದೇಗೆ..?