ಕ್ರೈಂರಾಜಕೀಯ

ಬಿಜೆಪಿ ಶಾಸಕನ ಬಾಮೈದನ ಮನೆಯಿಂದ ವಜ್ರಾಭರಣ ಕಳವು, 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನ

ನ್ಯೂಸ್ ನಾಟೌಟ್: ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳ್ಳರ ಹಾವಳಿಯಿಂದ ಬೆಂಗಳೂರಿನ ಜನ ಅಂತೂ ತತ್ತರಿಸಿ ಹೋಗಿದ್ದಾರೆ. ಇದೀಗ ಬೆಂಗಳೂರಿನ ಯಲಹಂಕದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ. ಅದೂ ಕೂಡ ಬಿಜೆಪಿ ಶಾಸಕರ ಬಾವಮೈದುನನ ಮನೆಯಲ್ಲಿ ಅನ್ನೋದು ವಿಶೇಷ.

ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ (SR Vishwanath) ಅವರ ಬಾಮೈದರಾಗಿರುವ ರಾಮಮೂರ್ತಿ ಅವರ ಮನೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರ, ನಗದು ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಬೆಲೆ ಬಾಳುವ ವಾಚ್​ಗಳು, ಮನೆ ಉಪಯೋಗಿ ವಸ್ತುಗಳು ಕೂಡ ಕಳ್ಳತನವಾಗಿದೆ. ಸುಮಾರು 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

ನ್ಯಾಯಾಂಗ ಬಡಾವಣೆಯ ನಿವಾಸಿಯಾಗಿರುವ ಬಿಬಿಎಂಪಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್, ಯಲಹಂಕ ಬಿಜೆಪಿ ಶಾಸಕರ ಬಾಮೈದರಾಗಿರುವ ರಾಮಮೂರ್ತಿ ಅವರು ಮೂರು ದಿನಗಳ ಹಿಂದೆ ಕೆಲಸದ ವಿಚಾರವಾಗಿ ಮನೆಗೆ ಬೀಗ ಜಡಿದು ಬೇರೆಡೆ ಹೋಗಿದ್ದರು.

ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಖದೀಮರು ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ, ವಜ್ರ, ಬೆಲೆ ಬಾಳುವ ವಾಚ್​ಗಳು, ಮನೆವಸ್ತುಗಳನ್ನೆಲ್ಲಾ ದೋಚಿದ್ದಾರೆ. ಮೂರು ದಿನದ ಬಳಿಕ ಇಂದು ಬೆಂಗಳೂರಿಗೆ ವಾಪಾಸ್ ಬಂದ ರಾಮಮೂರ್ತಿಯವರು ಮನೆಗೆ ಎಂಟ್ರಿಕೊಡುತ್ತಿದ್ದಂತೆ ಶಾಕ್ ಎದುರಾಗಿದೆ. ಸದ್ಯ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಯಲಹಂಕ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

1 ಕೆ.ಜಿಗೂ ಹೆಚ್ಚು ಚಿನ್ನಾಭರಣ, 15 ಕೆ.ಜಿ ಬೆಳ್ಳಿ, ವಜ್ರ, 15 ಲಕ್ಷ ನಗದು, ಬೆಲೆ ಬಾಳುವ ಹುಬ್ಲೋಟ್, ರಾಡೋ ಸೇರಿ 15 ವಾಚ್ ಗಳು, ಬೆಲೆಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಅಂದಾಜಿನ ಪ್ರಕಾರ 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ಮನೆ ಮಾಲೀಕ ರಾಮಮೂರ್ತಿ ಅವರು ತಿಳಿಸಿದ್ದಾರೆ.

https://www.youtube.com/watch?v=09utl2U70mY&t=19s

Related posts

ಬೆಂಗಳೂರಿಗರಿಗೆ ಕೆಲ ದಿನಗಳಿಂದ ನಿರಂತರವಾಗಿ ಕಾಡುತ್ತಿದೆ ಅಪರಿಚಿತ ಕರೆಗಳು..! ಪೊಲೀಸರಂತೆ ಮಾತನಾಡಿ ಬೆದರಿಸುತ್ತಿರುವುದೇಕೆ..?

ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ಶಾಸಕ..! ಹಣವಿಲ್ಲ ಎಂದು ಅನಾರೋಗ್ಯ ಪೀಡಿತ ಮಹಿಳೆ ಹೇಳಿದ್ದಕ್ಕೆ ಕರಗಿದ ಮನಸ್ಸು..! ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್‌..

2.10 ಕೋಟಿ ರೂಪಾಯಿ ಮೌಲ್ಯದ ನವಿಲುಗರಿ ಕಳ್ಳ ಸಾಗಾಣೆ..! ಚೀನಾಗೆ ಸಾಗಾಟವಾಗುತ್ತಿದ್ದ 28 ಲಕ್ಷ ನವಿಲು ಗರಿ