ನ್ಯೂಸ್ ನಾಟೌಟ್: ಉತ್ತರ ಪ್ರದೇಶ ಬಿಜೆಪಿ ಮುಖಂಡ ಬಬ್ಬನ್ ಸಿಂಗ್ ರಘುವಂಶಿ (70) ಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ ಶುಕ್ಲಾ ತಕ್ಷಣದಿಂದ ಜಾರಿಯಾಗವಂತೆ ವಜಾಗೊಳಿಸಿದ್ದಾರೆ ಎಂದು ಆಡಳಿತಾರೂಢ ಬಿಜೆಪಿಯ ಬಲಿಯಾ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಹೇಳಿದ್ದಾರೆ.
ವಿವಾಹ ಸಮಾರಂಭದ ವಿಡಿಯೊವೊಂದರಲ್ಲಿ ರಘುವಂಶಿ ಅವರ ತೊಡೆಯ ಮೇಲೆ ಕುಳಿತ ಮಹಿಳಾ ಡ್ಯಾನ್ಸರ್ ಜತೆ ಅಶ್ಲೀಲ ಮತ್ತು ಅಸಮಂಜಸ ನಡವಳಿಕೆ ಪ್ರದರ್ಶಿಸುತ್ತಿರುವುದು ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ರಘುವಂಶಿ 1993ರ ವಿಧಾನಸಭಾ ಚುನಾವಣೆಯಲ್ಲಿ ಬನ್ ಸಿದ್ಧ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು.
ರಾಸ್ರಾ ಕಿಸಾನ್ ಕೋ ಅಪರೇಟಿವ್ ಮಿಲ್ ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ರಘುವಂಶಿ ಈ ವಿಡಿಯೊ ನಕಲಿ ಎಂದಿದ್ದಾರೆ. ಪಕ್ಷದ ಕೆಲ ಮುಖಂಡರು ತಮ್ಮ ಮಾನಹಾನಿ ಮಾಡುವ ಉದ್ದೇಶದಿಂದ ಈ ವಿವಾದ ಸೃಷ್ಟಿಸಿದ್ದಾಗಿ ಆಪಾದಿಸಿದ್ದಾರೆ.
“ನನ್ನ ಇಮೇಜ್ ಗೆ ಕಳಂಕ ಹಚ್ಚುವ ದೃಷ್ಟಿಯಿಂದ ಮಾಡಿದ ಉದ್ದೇಶ ಪೂರ್ವಕ ಪಿತೂರಿ ಇದಾಗಿದೆ. ಇದು ನಕಲಿ ವಿಡಿಯೊ. ಶಾಸಕ ಕೇತಕಿ ಸಿಂಗ್ ಅವರ ಕುಟುಂಬದ ಸದಸ್ಯರು ಈ ಪಿತೂರಿಯ ಹಿಂದಿದ್ದಾರೆ ಎಂದು ದೂರಿದ್ದಾರೆ. ಬಿಹಾರದ ದುರ್ಗಿಪುರ ಗ್ರಾಮದ ಮುಖ್ಯಸ್ಥನ ವಿವಾಹ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು, ಶಾಸಕರ ಕುಟುಂಬದವರೂ ಇದರಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದ್ದಾರೆ. ನನ್ನ ಮಾನಹಾನಿ ಮಾಡುವ ಉದ್ದೇಶದಿಂದ ರಹಸ್ಯವಾಗಿ ಇದನ್ನು ಚಿತ್ರೀಕರಿಸಿದ್ದಾರೆ. ನಾನು ಅಂಥದ್ದೇನೂ ಮಾಡಿಲ್ಲ. ನಾನು ಈಗ ವಯೋವೃದ್ಧ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಪಕ್ಷ ಮುಖಂಡನನ್ನು ವಜಾಗೊಳಿಸಿದೆ.
ಲೈವ್ ನಲ್ಲಿರುವಾಗಲೇ ಯುವತಿಯನ್ನು ಗುಂಡಿಕ್ಕಿ ಹತ್ಯೆ..! ವಿಡಿಯೋ ವೈರಲ್