ಕರಾವಳಿಕಾಸರಗೋಡು

ಅಧಿವೇಶನದ ವೇಳೆ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ? ಕಮಲ ಪಾಳಯಕ್ಕೆ ಮತ್ತೊಮ್ಮೆ ಬಹಿರಂಗ ಮುಖಭಂಗ

ನ್ಯೂಸ್ ನಾಟೌಟ್: ಹನ್ನೊಂದು ವರ್ಷಗಳ ಹಿಂದೆ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಇಬ್ಬರು ಬಿಜೆಪಿ ಸಚಿವರು ಅಶ್ಲೀಲ ಸಿನಿಮಾ ನೋಡಿ ರಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರಕರಣ ಇಡೀ ರಾಜ್ಯದ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದ್ದು ಬಿಜೆಪಿ ಮುಖಭಂಗಕ್ಕೆ ಒಳಗಾಗಿದೆ.

ತ್ರಿಪುರಾ ವಿಧಾನ ಸಭೆಯ ಅಧಿವೇಶನದ ವೇಳೆ ಬಿಜೆಪಿ ಶಾಸಕ ಜಾಧವ್ ಲಾಲ್‌ನಾಥ್ ಅಶ್ಲೀಲ ವಿಡಿಯೋ ನೋಡುವಾಗ ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ತುಣುಕುಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಬಜೆಟ್ ವಿಚಾರ ಚರ್ಚೆ ನಡೆಸುತ್ತಿದ್ದಾಗ ಶಾಸಕ ಇಂತಹ ಕೀಳು ಕೃತ್ಯವನ್ನು ಎಸಗಿದ್ದಾರೆ. ಆದರೆ ತನ್ನ ಮೇಲಿನ ಆರೋಪವನ್ನು ಜಾಧವ್ ತಳ್ಳಿ ಹಾಕಿದ್ದಾರೆ. ಈ ಬೆನ್ನಲ್ಲೇ ಸದನದ ಘನತೆಗೆ ಚ್ಯುತಿ ತಂದ ಜಾಧವ್ ವರ್ತನೆಗೆ ಭಾರೀ ಟೀಕೆ ಕೇಳಿ ಬಂದಿದೆ.

Related posts

ಪಯಸ್ವಿನಿ ಹೊಳೆ ಬದಿಯಲ್ಲೊಂದು ದೇವರ ವನಭೋಜನ..! ಸಂಪಾಜೆಯ ಪಂಚಲಿಂಗೇಶ್ವರನ ಸನ್ನಿಧಿಯ ಈ ವನಭೋಜನಕ್ಕಿದೆ ವಿಶೇಷ ಶಕ್ತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಿದ್ದ ವೀಕೆಂಡ್ ಕರ್ಫ್ಯೂ ರದ್ದು, ರಾತ್ರಿ ಕರ್ಫ್ಯೂ ಎಂದಿನಂತೆ ಮುಂದುವರಿಕೆ

ಉಪ್ಪಿನಂಗಡಿ: ಕಂದಕಕ್ಕೆ ಉರುಳಿದ ಜೀಪ್ ,ಪುಟ್ಟ ಮಕ್ಕಳು ಸಹಿತ ನಾಲ್ಕು ಮಂದಿಗೆ ಗಾಯ