ಕ್ರೈಂದೇಶ-ವಿದೇಶಬೆಂಗಳೂರುರಾಜಕೀಯವೈರಲ್ ನ್ಯೂಸ್

ಜಾಮೀನು ಪಡೆದು ಹೊರಬಂದಿದ್ದ ಬಿಜೆಪಿ ಶಾಸಕ ಮತ್ತೆ ಅರೆಸ್ಟ್..! ಮುನಿರತ್ನ ಬಳಿ ಇದೆ ಹಲವರ ಖಾಸಗಿ ವಿಡಿಯೋಗಳು..?

ನ್ಯೂಸ್ ನಾಟೌಟ್: ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರ್​ಆರ್​ ನಗರ ಬಿಜೆಪಿ (BJP) ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ರಾಮನಗರದ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಇದೀಗ ಬೆಳಕಿಗೆ ಬರುತ್ತಿದೆ. ಮುನಿರತ್ನ ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ ಎಂದು ಅತ್ಯಾಚಾರ ಸಂತ್ರಸ್ತೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.

ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು. ಅತ್ಯಾಚಾರ ಸಂತ್ರಸ್ತೆ ಮೂಲಕ ಹನಿಟ್ರ್ಯಾಪ್​​ಗೆ ಯತ್ನಿಸಿದ್ದರು. ಹನಿಟ್ರ್ಯಾಪ್​ಗೆ ಅಮಾಯಕ ಹೆಚ್​​ಐವಿ ಸೋಂಕಿತರನ್ನೂ ಬಳಸಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಇದೀಗ ಕೇಳಿಬಂದಿವೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Click

https://newsnotout.com/2024/09/ganeshan-chaturti-incident-similer-to-nagamangala-kannada-news/
https://newsnotout.com/2024/09/hdk-kannada-news-nagamangala-issue-he-will-try-to-release-accused-of-that-conflict/

Related posts

ನೀರಿಲ್ಲದೆ ಕರ್ನಾಟಕದ 4 ವಿದ್ಯುತ್ ಘಟಕಗಳು ಬಂದ್..! ವಿದ್ಯುತ್ ಅಭಾವದ ಭೀತಿ..!

ಹಿಂದೂ ವಿವಾಹ ನಂತರ ಮತಾಂತರವಾದ್ರೆ ಮದುವೆ ಅಸಿಂಧು ಆಗುತ್ತದೆಯೇ? ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿ ಜೀವನಾಂಶ ಪಾವತಿಸಬೇಕೆ? ಕೋರ್ಟ್ ಹೇಳಿದ್ದೇನು?

ನಾಳೆ(ಎ.8) ವರ್ಷದ ಮೊದಲ ಸೂರ್ಯ ಗ್ರಹಣ,ಯಾವ ಹೊತ್ತಿಗೆ ಗೋಚರ? ಇಲ್ಲಿದೆ ಸಂಪೂರ್ಣ ಮಾಹಿತಿ