ಕ್ರೈಂ

ಬಿಜೆಪಿ ಯುವ ಮೋರ್ಚಾ ನಾಯಕ ಭೀಕರ ಹತ್ಯೆ

235
Spread the love

ನ್ಯೂಸ್ ನಾಟೌಟ್ : ಬಿಜೆಪಿ ಯುವನಾಯಕನೋರ್ವನ ಮೇಲೆ ಮಚ್ಚು ಬೀಸಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ವರದಿಯಾಗಿದೆ.

ಮಂಗಳವಾರ ಮಾರಕಾಸ್ತ್ರಗಳಿಂದ ಬಿಜೆಪಿ ಯುವ ಮೊರ್ಚಾ ನಾಯಕ ಪ್ರವೀಣ್ ನೆಟ್ಟಾರು ಮೇಲೆ ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ದಾಳಿ ನಡೆದಿತ್ತು.  ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು  ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರವೀಣ್‌ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಸದ್ಯ ಯಾರು ಕೊಲೆ ಮಾಡಿದ್ದಾರೆ ಏತಕ್ಕಾಗಿ ಕೊಲೆ ನಡೆದಿದೆ ಅನ್ನುವ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.

See also  ಕಾಸರಗೋಡು: ತಡರಾತ್ರಿ ಅಗ್ನಿಗಾಹುತಿಯಾದ 5 ಅಂಗಡಿಗಳು..! 3 ಗಂಟೆಗಳ ಕಾಲ ಉರಿದ ಬೆಂಕಿ
  Ad Widget   Ad Widget   Ad Widget   Ad Widget   Ad Widget   Ad Widget