ದೇಶ-ವಿದೇಶರಾಜಕೀಯ

ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಅಣ್ಣಾಮಲೈಗೆ ಸೋಲು..? ಎಕ್ಸಿಟ್ ಪೋಲ್ ರಿಪೋರ್ಟ್ ಹೇಳಿದ್ದೇನು..?

ನ್ಯೂಸ್ ನಾಟೌಟ್: ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಣ್ಣಾಮಲೈ ಕೊಯಮತ್ತೂರಿನಲ್ಲಿ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಭಾರಿ ಸೋಲು ಕಾಣುವ ಸಾಧ್ಯತೆ ಇದೆ ಎಂದು ಎಕ್ಸಿಟ್ ಪೋಲ್ ರಿಪೋರ್ಟ್ ಹೇಳಿದೆ.
ಅಲ್ಲಿ ಡಿಎಂಕೆ ಅಭ್ಯರ್ಥಿ ಪಿ ಗಣಪತಿ ರಾಜ್ ಕುಮಾರ್ ಗೆಲ್ಲಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಈ ವರದಿಯನ್ನು ಅಣ್ಣಾಮಲೈ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ನಾವು ಏನು ತಲೆ ಕೆಡಿಸಿಕೊಳ್ಳುವುದಿಲ್ಲ. ಆರಾಮವಾಗಿ ನಾವು ಗೆಲ್ಲುತ್ತೇವೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿ ಕಳಿಸುತ್ತೇವೆ ಎಂದು ತಿಳಿಸಿದ್ದಾರೆ. ಇದುವರೆಗೆ ತಮಿಳುನಾಡಿನಲ್ಲಿ ಬಿಜೆಪಿಯ ವರ್ಚಸ್ಸು ಇರಲಿಲ್ಲ. ಆದರೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಬಿಜೆಪಿ ಸೇರಿದ ಬಳಿಕ ತಮಿಳುನಾಡಿನಲ್ಲಿ ಬಿಜೆಪಿ ಚಿಗುರಿದೆ. ಅಣ್ಣಾಮಲೈ ಸೋಲಿನ ಲೆಕ್ಕಾಚಾರದ ನಡುವೆಯೂ ಬಿಜೆಪಿ ಐದು ಸ್ಥಾನಗಳನ್ನು ತಮಿಳುನಾಡಿನಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಕೊಯಮತ್ತೂರಿನಲ್ಲಿ ಪ್ರಸ್ತುತ ಸಿಪಿಎಂ ನಾಯಕ ಪಿಆರ್ ನಟರಾಜನ್ ಸಂಸದರಾಗಿದ್ದಾರೆ. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ನಟರಾಜನ್ 45.85 ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಬಿಜೆಪಿಯ ಸಿಪಿ ರಾಧಾಕೃಷ್ಣನ್ ಅವರು 31.47 ರಷ್ಟು ಮತಗಳನ್ನಷ್ಟೇ ಪಡೆದುಕೊಂಡಿದ್ದರು. ಒಟ್ಟಿನಲ್ಲಿ ಈ ಸಲದ ಚುನಾವಣಾ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

Related posts

8 ಜನರೊಂದಿಗೆ ಮದುವೆಯಾಗಿದ್ದಾಳೆ ಎಂದು ಹೈಕೋರ್ಟ್ ಮೆಟ್ಟಿಲೇರಿದ ಪತಿ..! ಎಂಟಲ್ಲ ನಾಲ್ಕೇ ಎಂದ ಮಹಿಳೆ ಪರ ವಕೀಲೆ..!

ದರ್ಶನ್ ನನ್ನು​ ನೋಡಲು ರಾಯಚೂರಿನಿಂದ ಬಂದು ಜೈಲಿನೆದುರು ಕಣ್ಣೀರಿಟ್ಟ ಅಭಿಮಾನಿಗಳು..! ನಾಳೆಯಾದ್ರೂ ‘ಡಿ ಬಾಸ್’ ಅನ್ನು ನೋಡಿಯೇ ಊರಿಗೆ ಮರಳೋದು ಎಂದ ಫ್ಯಾನ್ಸ್..!

ಲೋಕಸಭಾ ಚುನಾವಣೆಗೆ ಟಿಕೆಟ್​ ಕೈತಪ್ಪಿದ ವಿಚಾರ,ಹುಟ್ಟು ಹಬ್ಬದಂದು ಅಚ್ಚರಿಯ ಹೇಳಿಕೆ;ಕಾಂಗ್ರೆಸ್​ ನಾಯಕರು ಸಂಪರ್ಕಿಸಿರೋದು ನಿಜ ಎಂದ ಮಾಜಿ ಮುಖ್ಯ ಮುಂತ್ರಿ ಡಿ.ವಿ.ಎಸ್‌.