Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ರಾತ್ರಿ BJP ನಾಯಕನ ನಿವಾಸದ ಬಳಿ ಭಾರೀ ಸ್ಫೋಟ..! ಬೆಚ್ಚಿಬಿದ್ದ ಗಾಢ ನಿದ್ರೆಯಲ್ಲಿದ್ದ ಜನ..!

532

ನ್ಯೂಸ್ ನಾಟೌಟ್: ಪಂಜಾಬ್‌ ರಾಜ್ಯದ ಜಲಂಧರ್‌ ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಎಂಬವರ ನಿವಾಸದ ಹೊರಗೆ ಭಾರೀ ಸ್ಫೋಟ ಸಂಭವಿಸಿದ್ದು, ಆಂತಕ ಸೃಷ್ಟಿಸಿದೆ.
ಇಂದು(ಎ.08) ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಗ್ರೇನೇಡ್ ದಾಳಿಯೇ ಅಥವಾ ಮತ್ತಿತರ ವಸ್ತುಗಳಿಂದ ಸಂಭವಿಸಿದ ಸ್ಫೋಟವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟದ ಶಬ್ಧ ಕೇಳಿಸಿತು. ಈ ವೇಳೆ ಎಲ್ಲರೂ ಮಲಗಿದ್ದೆವು. ಭೂಮಿಯೇ ನಡುಗಿದ ಶಬ್ಧ ಕೇಳಿಸಿತು. ನಂತರವೇ ಸ್ಫೋಟ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತು. ಬಳಿಕ ನನ್ನ ಗನ್ ಮ್ಯಾನ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಿದೆ. ಸಿಸಿಟಿವಿ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ತಜ್ಞರು ಸಹ ಸ್ಥಳದಲ್ಲಿದ್ದಾರೆಂದು ಬಿಜೆಪಿ ನಾಯಕ ಮನೋರಂಜನ್ ಹೇಳಿದ್ದಾರೆ.

ಜಲಂಧರ್‌ ನ ಉಪ ಪೊಲೀಸ್ ಆಯುಕ್ತ ಮನ್ಪ್ರೀತ್ ಸಿಂಗ್ ಘಟನೆಯನ್ನು ದೃಢಪಡಿಸಿದ್ದು, ಮನೋರಂಜನ್ ಕಾಲಿಯಾ ಅವರ ನಿವಾಸದ ಬಳಿ ಸ್ಫೋಟ ಸಂಭವಿಸಿದೆ. ವಿಧಿವಿಜ್ಞಾನ ತಂಡವು ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ.

ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಭೀಕರ ಹಲ್ಲೆ..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಬೆಲೆ ಏರಿಕೆಗಳ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ತಯಾರಿ..! ಮಂಗಳೂರು, ಉಡುಪಿ ಜನರಿಗೆ ಮತ್ತೊಂದು ಶಾಕ್..!

ಬೆಟ್ಟಿಂಗ್ ಆಪ್ ಅನ್ನು ಪ್ರಚಾರ ಮಾಡಿದ್ದಕ್ಕೆ ಸೋನು ಗೌಡ ಸೇರಿ 100ಕ್ಕೂ ಹೆಚ್ಚು ಮಂದಿಯ ವಿಚಾರಣೆ..! ಕ್ಷಮೆ ಕೇಳಿದ ರೀಲ್ಸ್ ಸ್ಟಾರ್‌ ಗಳು..!

See also  'ಉಪ್ಪಿ­ಟ್ಟುಬೇಡ, ಬಿರಿಯಾನಿ ಬೇಕು' ಎಂದ ಮಗುವಿನ ವಿಡಿಯೋ ವೈರಲ್ ಆದ ಬಳಿಕ ಸರ್ಕಾರದ ಮಹತ್ವದ ನಿರ್ಧಾರ..! ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget