ಕರಾವಳಿಕಾಸರಗೋಡು

ಡಬಲ್ ಎಂಜಿನ್ ಸರಕಾರಕ್ಕೆ ಬೆಂಬಲ ಕೊಡಿ, ಕಾಂಗ್ರೆಸ್ ಅನ್ನು ಮನೆಗೆ ಓಡಿಸಿ

336

ನ್ಯೂಸ್ ನಾಟೌಟ್: ಕೇಂದ್ರ ಸರಕಾರ ನೇತೃತ್ವದ ಡಬಲ್ ಎಂಜಿನ್ ಸರಕಾರಕ್ಕೆ ನಿಮ್ಮ ಬೆಂಬಲ ನೀಡಿ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತನ್ನಿ, ಕಾಂಗ್ರೆಸ್ ಪಕ್ಷವನ್ನು ಮನೆಗೆ ಓಡಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಸುಳ್ಯದಲ್ಲಿ ಸಾರ್ವಜನಿಕ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ’ ಸಿದ್ದರಾಮಯ್ಯ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಯಾಮಾರಿಸುತ್ತಿದ್ದಾರೆ. ಅವರ ಮಾತುಗಳನ್ನು ನಂಬಿ ಮೋಸ ಹೋಗಬಾರದು. ಸಮ್ಮಿಶ್ರ ಸರಕಾರ ಬರುವುದಕ್ಕೆ ಅವಕಾಶ ನೀಡಬೇಡಿ. ಸುಭದ್ರ ಸರಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ತಿಳಿಸಿದರು. ಮೋದಿ ಸರಕಾರ ಪಿಎಫ್ಐ ಅನ್ನು ಬ್ಯಾನ್ ಮಾಡಿದೆ. ಪಿಎಫ್ಐ ಬ್ಯಾನ್ ಮಾಡಿದ್ದರಿಂದ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ. ಇಂತಹ ನಿರ್ಣಯ ಬೇಕಾದರೆ ಬಿಜೆಪಿಯನ್ನು ಬೆಂಬಲಿಸುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಮಹಿಳೆಯ ಸಬಲೀಕರಣಕ್ಕೆ ಅವಕಾಶ ನೀಡಬೇಕು. ಇದಕ್ಕಾಗಿ ಭಾಗೀರಥಿ ಮುರುಳ್ಯ ಅವರನ್ನು ಬೆಂಬಲಿಸಬೇಕು . ಮುಂದಿನ ಚುನಾವಣೆಯಲ್ಲಿ ಕಮಲಕ್ಕೆ ಮತ ಒತ್ತುವ ಮೂಲಕ ಬಿಜೆಪಿಯನ್ನು ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ನಡ್ಡಾ ಜನರಲ್ಲಿ ಮನವಿ ಮಾಡಿದರು.

See also  ಶಬರಿಮಲೆಯ ಪಂಬ ಸನ್ನಿಧಿಯಲ್ಲಿ ಬಂಟ್ವಾಳದ ಶಿಕ್ಷಕ ಸಾವು..! ಕುಸಿದು ಬಿದ್ದು ಮೃತ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget