ಕರಾವಳಿಪುತ್ತೂರು

ವಿದೇಶಿ ಜೈಲಿನಲ್ಲಿ ಕಡಬದ ಯುವಕನ ಪರದಾಟ ಪ್ರಕರಣ, ಸಂಸದ ನಳಿನ್ ಕುಮಾರ್ ಸೂಚನೆ ಮೇರೆಗೆ ಸಂತ್ರಸ್ತನ ಮನೆಗೆ ಬಿಜೆಪಿ ನಿಯೋಗ ಭೇಟಿ

214

ನ್ಯೂಸ್ ನಾಟೌಟ್: ಹ್ಯಾಕರ್ ಗಳ ವಂಚನೆಯ ಜಾಲಕ್ಕೆ ಸಿಲುಕಿ ಸೌದಿ ಅರೇಬಿಯಾದ ಜೈಲಿನಲ್ಲಿರುವ ಕಡಬ ತಾಲೂಕಿನ ಐತೂರು ಗ್ರಾಮದ ಮೂಜುರು ಚಂದ್ರಶೇಖರ್ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ಬಿಜೆಪಿ ನಿಯೋಗ ಭೇಟಿ ನೀಡಿದೆ. ಕುಟುಂಬದೊಂದಿಗೆ ಬಿಜೆಪಿ ನಿಯೋಗ ಮಾತನಾಡಿದ ಧೈರ್ಯ ತುಂಬುವ ಕೆಲಸ ಮಾಡಿದೆ.

ಈ ವೇಳೆ ಮನೆಯವರೊಂದಿಗೆ ದೂರವಾಣಿ ಮೂಲಕ ಸ್ವತಃ ನಳಿನ್ ಕುಮಾರ್ ಕಟೀಲ್ ಮಾತನಾಡಿ ಚಂದ್ರಶೇಖರ ಅವರನ್ನು ಬಿಡುಗಡೆಗೊಳಿಸಲು ಸೂಕ್ತ ನೆರವು ನೀಡುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಕಲ್ಪುರೆ. ಎಪಿಎಂಸಿ ಮಾಜಿ ಸದಸ್ಯ, ಶಕ್ತಿ ಕೇಂದ್ರದ ಪ್ರಮುಖ ಮೇದಪ್ಪ ಗೌಡ. ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಕಾಶ್ ಎನ್ ಕೆ, ಬಿಜೆಪಿ ಪ್ರಮುಖರಾದ ಸಂಕಪ್ಪ ಕೊಂಡೆ, ಗಣೇಶ್ ಮೂಜುರು, ಕೊಯಿಲ ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ದೇಂತಾರು ಉಪಸ್ಥಿತರಿದ್ದರು.

See also  ಬಿಜೆಪಿ ನಾಯಕರ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget