ಕರಾವಳಿಪುತ್ತೂರುರಾಜಕೀಯ

ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಯೋಜನೆ ಗೃಹಜ್ಯೋತಿಗೆ ಅತೀ ಹೆಚ್ಚು ಅರ್ಜಿ ಸಲ್ಲಿಕೆ? ಶಾಸಕ ಅಶೋಕ್ ರೈ ಹೇಳಿದ್ದೇನು?

248

ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಉಚಿತ ಯೋಜನೆಗಳ ಬಗ್ಗೆಯೇ ಎಲ್ಲೆಲ್ಲೂ ಚರ್ಚೆಯಾಗುತ್ತಿದೆ. ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಯೋಜನೆ ಗೃಹ ಜ್ಯೋತಿಗೆ ಅತೀ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗುತ್ತಿದೆ. ಇದನ್ನು ಸ್ವತಃ ಪುತ್ತೂರು ಶಾಸಕ ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಹಿಂದಿನ ಸರ್ಕಾರದಂತೆ ಅಲ್ಲ. ಪಾರದರ್ಶಕ ಆಡಳಿತ ಮೂಲಕ ಸರಕಾರ ಪ್ರತಿ ಜನರ ಮನಸ್ಸನ್ನು ಗೆದ್ದಿದೆ. ಇಂದು ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯ ಜನರೂ ಕೂಡ ಕಾಂಗ್ರೆಸ್‌ ಅನ್ನು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಾಂಗ್ರೆಸ್‌ಗೆ ಅವರು ಆಶೀರ್ವಾದ ಮಾಡಲಿದ್ದಾರೆ ಎಂದು ಅಶೋಕ್ ರೈ ತಿಳಿಸಿದ್ದಾರೆ.
ಸದ್ಯ ಗೃಹ ಜ್ಯೋತಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಹೆಚ್ಚು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಸಂತೋಷದ ವಿಚಾರ. ಇನ್ನುಳಿದ ಯೋಜನೆಯನ್ನು ಸರಕಾರ ಜಾರಿಗೆ ತಂದಿದ್ದೇ ಆದರೆ ಇನ್ನು 25 ವರ್ಷ ರಾಜ್ಯದಲ್ಲಿ ಕಾಂಗ್ರಸ್ ಬರುವುದು ನಿಶ್ಚಿತ ಎಂದು ಕಾಣಿಸುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನ ಕೊಡ್ತಾವೆ ಅಂತ ಬಿಜೆಪಿಯವ್ರು ಹೇಳಿದರು. ಆದರೆ ಕಾಂಗ್ರೆಸ್ ಸುಳ್ಳು ಹೇಳಿಲ್ಲ, ಅದನ್ನ ಕಾರ್ಯರೂಪಕ್ಕೆ ತರುವ ಮೂಲಕ ಮಾಡಿ ತೋರಿಸಿದೆ. ಭ್ರಷ್ಟಾಚಾರ ರಹಿತ ಸರಕಾರವನ್ನು ನೀಡುತ್ತಿದೆ. ಹಿಂದೆ ಬಿಜೆಪಿಯವರು ಒಂದು ವರ್ಗಾವಣೆ ಮಾಡುವುದಕ್ಕೆ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ ನಮ್ಮ ಸರಕಾರ ಇಂದು ಭ್ರಷ್ಟಾಚಾರಿಗಳನ್ನು ಭೇಟೆಯಾಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

See also  ಪದ್ಮರಾಜ್ ಪೂಜಾರಿ 'ಎಂಪಿ' ಆಗಿಯೇ ಆಗ್ತಾರೆ, ಭವಿಷ್ಯ ನುಡಿದ ಪುತ್ತೂರು ಶಾಸಕ ಅಶೋಕ್ ರೈ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget