ಸುಳ್ಯ

ಬಿಜೆಪಿ ಜನಾಶೀರ್ವಾದ ಯಾತ್ರೆ ಕೊರೊನಾ ಹರಡುವ ಜನಾಕ್ರೋಶ ಯಾತ್ರೆಯಾಗದಿರಲಿ: ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ

ಸುಳ್ಯ : ಬಿಜೆಪಿ ಜನಾಶೀರ್ವಾದ ಯಾತ್ರೆ ಕೊರೊನಾ ಹರಡುವ ಯಾತ್ರೆ ಆಗದಿರಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ದೇಶ, ರಾಜ್ಯದಲ್ಲಿ ಕೊವಿಡ್ ಮಹಾಮಾರಿ ಒಂದಷ್ಟು ಕಡಿಮೆ ಪ್ರಮಾಣಕ್ಕೆ ಇಳಿದಾಗ ದೇಶಾದ್ಯಂತ ಚುನಾವಣೆಯನ್ನು ಘೋಷಣೆ ಮಾಡಿ ಬಿಜೆಪಿಯ ಗ್ರಾಮ ಮಟ್ಟದ ನಾಯಕರಿಂದ ಹಿಡಿದು ಮೋದಿಜಿ ಯವರೆಗೆ ಎಗ್ಗಿಲ್ಲದೆ ಪಶ್ಚಿಮ ಬಂಗಾಳ , ಕೇರಳ , ತಮಿಳುನಾಡು , ಪುಧಿಚೇರಿ , ಕರ್ನಾಟಕ ಹಾಗು ಇನ್ನಿತರ ರಾಜ್ಯಗಳ ಚುನಾವಣೆಯ ಬೃಹತ್ ಸಭೆಗಳನ್ನು ನಡೆಸಿ  , ಕೊರೊನಾ ರೋಗ ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ದಿನವೊಂದಕ್ಕೆ 4 ಲಕ್ಷಕ್ಕಿಂತಲೂ ಅಧಿಕ ಸೋಂಕಿತರು  ಮತ್ತು  3 ಸಾವಿರಕ್ಕಿಂತ ಅಧಿಕ ಮಂದಿ ಕಾಯಿಲೆಗೆ ಮೃತರಾಗಿರುವಂತದ್ದು ಈಗ ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ . ಇದೀಗ ಕೊರೊನಾ ಮಹಾಮಾರಿ ನಮ್ಮ ರಾಜ್ಯದಲ್ಲಿ ಕೊಂಚ  ಇಳಿಮುಖಗೊಂಡಿರುವುದು ಜನ ಸಾಮಾನ್ಯರ ಮನಸ್ಸಿನಲ್ಲಿ ಒಂದಿಷ್ಟು ಧೈರ್ಯವನ್ನು ತಂದುಕೊಳ್ಳುವಂತಾಗಿದೆ . ಆದರೆ , ಕೇಂದ್ರ ಸರಕಾರದ ನಾಲ್ಕು ಮಂತ್ರಿಗಳು ಮೋದಿಯವರ  ಸೂಚನೆಯ ಮೇರೆಗೆ ಕರ್ನಾಟಕದ  4 ದಿಕ್ಕುಗಳಿಂದ ಜನಾಶೀರ್ವಾದ ಕಾರ್ಯಕ್ರಮದ ಯಾತ್ರೆ ಯನ್ನು ಈ ದೇಶ ಮತ್ತು ರಾಜ್ಯದ ಜನರು ಹಸಿವು , ರೋಗ , ಪ್ರವಾಹ , ಬೆಲೆಯೇರಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ  ಕೈಗೊಂಡು ಅಲ್ಲಲ್ಲಿ ಸಾವಿರಾರು ಜನರನ್ನು ಸೇರಿಸಿ ಕೊವಿಡ್ 19 ರ  ನಿಯಮವನ್ನು ಉಲ್ಲಂಘಿಸಿ ಲಂಗು ಲಗಾಮಿಲ್ಲದೆ ಅವರ ಕಾರ್ಯಕ್ರಮದ ಪ್ರಚಾರ ಭಾಷಣಗಳನ್ನು ಮಾಡುತ್ತಿರುವುದು ತೀರ ಕಳವಳಕಾರಿಯಾದ ಸಂಗತಿಯಾಗಿರುತ್ತದೆ. ಇದು ಜನಾಕ್ರೋಶಕ್ಕೆ ಕಾರಣವಾಗಿರುತ್ತದೆ ಎಂದು ತಿಳಿಸಿದ್ದಾರೆ.

Related posts

ಸಮೀಕ್ಷೆಗಳು ಕಾಂಗ್ರೆಸ್ ಪರ ಇದ್ದರೂ ಉಲ್ಟಾ ಆಗಲಿವೆ,ಸುಬ್ರಹ್ಮಣ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆತ್ಮವಿಶ್ವಾಸದ ಮಾತು

ಸೆ.4 ರಂದು ಸುಳ್ಯ ಮೊಸರುಕುಡಿಕೆ ಉತ್ಸವ, ಅದ್ಧೂರಿಯಾಗಿ ನಡೆಯಲಿವೆ ಧಾರ್ಮಿಕ ಸಭೆ, ಶೋಭಾಯಾತ್ರೆ

ಮೂಲ್ಕಿ:ತುಳುವಿನಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ:ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ