ಕರಾವಳಿಪುತ್ತೂರು

ಪುತ್ತೂರು: ಬೃಹತ್ ಮಹಿಳಾ ಸಮಾವೇಶಕ್ಕೆ ಮುಂದಾದ ಅರುಣ್ ಕುಮಾರ್ ಪುತ್ತಿಲ..! ಮಹಿಳಾ ಮಣಿಗಳ ಸಮಾವೇಶದಿಂದ ಬಿಜೆಪಿ, ಕಾಂಗ್ರೆಸ್‌ಗೆ ಉರುಳಾಗಬಹುದೇ?

298

ನ್ಯೂಸ್ ನಾಟೌಟ್‌ : ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ಕೇಂದ್ರಗಳಲ್ಲಿ ಬಿಗುವಿನ ಫೈಟ್ ಎದುರಾಗಿದೆ. ಅಂತಹ ಕ್ಷೇತ್ರಗಳಲ್ಲಿ ಪುತ್ತೂರಿನ ವಿಧಾನಸಭಾ ಕ್ಷೇತ್ರವೂ ಒಂದು ಅನ್ನುವುದು ವಿಶೇಷ.

ಈ ಕ್ಷೇತ್ರದಲ್ಲಿ ಹಿಂದೂ ಪರ ನಾಯಕ ಅರುಣ್ ಪುತ್ತಿಲ ಬಿಜೆಪಿಗೆ ಟಾಂಗ್ ಕೊಡುವುದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವೂ ನಿರೀಕ್ಷೆಗೂ ಮಿಗಿಲಾದ ಕುತೂಹಲವನ್ನು ಮೂಡಿಸಿದ ಬೆನ್ನಲ್ಲೇ ಏ. 28 ರಂದು ಸಾವಿರಕ್ಕೂ ಅಧಿಕ ಮಹಿಳೆಯರನ್ನು ಒಟ್ಟುಗೂಡಿಸಿ ಬೃಹತ್ ಸಮಾವೇಶಕ್ಕೆ ಪುತ್ತಿಲ ಕೈ ಹಾಕಿದ್ದಾರೆ.

ಈ ಬಗ್ಗೆ ಸೋಮವಾರ ಸಂಜೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

See also  77ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget