ಕರಾವಳಿಕೊಡಗುದೇಶ-ಪ್ರಪಂಚನಮ್ಮ ತುಳುವೇರ್ಪುತ್ತೂರುಬೆಂಗಳೂರುರಾಜಕೀಯಸುಳ್ಯ

ಧರ್ಮೇಂದ್ರ ಪ್ರಧಾನ್‌ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ

ನ್ಯೂಸ್ ನಾಟೌಟ್: ಕರ್ನಾಟಕ ೨೦೨೩ರ ವಿಧಾನಸಭಾ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ರಾಜಕೀಯ ಪಕ್ಷಗಳಿಂದ ಬಿರುಸಿನ ತಯಾರಿ ನಡೆಯುತ್ತಿದೆ. ಬಿಜೆಪಿಯಿಂದ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ನೇಮಕ ಮಾಡಲಾಗಿದೆ.

ಜತೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾ ಮಲೈ ಅವರನ್ನು ಸಹ ಪ್ರಭಾರಿಯನ್ನಾಗಿ ಮಾಡಲಾಗಿದೆ. ಅಣ್ಣಾಮಲೈ ಪೊಲೀಸ್‌ ಅಧಿಕಾರಿಯಾಗಿದ್ದಾಗ ರಾಜ್ಯದಲ್ಲಿ ಆರಂಭದಲ್ಲಿ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮೊದಲಾದೆಡೆ ಕಾರ್ಯನಿರ್ವಹಿಸಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ಕರ್ನಾಟಕ ಸಿಂಗಂ ಎಂದೇ ಖ್ಯಾತಿಯಾಗಿದ್ದರು. ರಾಜ್ಯದ ಆಗುಹೋಗುಗಳನ್ನು ಅರಿತಿರುವ ಅಣ್ಣಾಮಲೈ ಅವರನ್ನುವಿಧಾನಸಭಾ ಚುನಾವಣಾ ಸಹಪ್ರಭಾರಿಯನ್ನಾಗಿ ನೇಮಕಗೊಳಿಸಿದರೆ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬಹುದು ಎಂಬುವುದು ಬಿಜೆಪಿ ಲೆಕ್ಕಾಚಾರವಾಗಿದೆ.

Related posts

ಮತ್ತೆ ಭೂಕಂಪ, ಮನೆಯಿಂದ ಹೊರಗೋಡಿದ ಜನತೆ

1 ಸಾವಿರಕ್ಕೂ ಹೆಚ್ಚು ಬಾರ್ & ರೆಸ್ಟೋರೆಂಟ್‌ ಗಳಿಗೆ ನೋಟಿಸ್..! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನಗಳ ಕಾಲ ಅತ್ಯಾಚಾರ..! ಹೊಟೇಲ್ ರೂಮ್ ನಲ್ಲಿ ಕೂಡಿ ಹಾಕಿದ್ದ ಆರೋಪಿಗಳು..!