Uncategorized

ಬಿಜೆಪಿಗೆ ಕಾಂಗ್ರೆಸ್‌ ನಿಂದ ಶಾಸಕರನ್ನು ಕಳುಹಿಸಿದ್ದು ಸಿದ್ದರಾಮಯ್ಯ ಎಂದ ಕೇಂದ್ರ ಸಚಿವ..! ಸ್ಫೋಟಕ ಹೇಳಿಕೆ ನೀಡಿದ ಪ್ರಹ್ಲಾದ್‌ ಜೋಶಿ..!

ನ್ಯೂಸ್‌ ನಾಟೌಟ್‌: ಬಿಜೆಪಿ ಸರ್ಕಾರ ರಚನೆಗೆ ಕೆಲ ಶಾಸಕರನ್ನು ಸಿದ್ದರಾಮಯ್ಯನವರೇ ಕಳುಹಿಸಿದ್ದರು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಆಪರೇಷನ್‌ ಕಮಲ ಮಾಡಲು ಮುಂದಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕರನ್ನು ಕಳುಹಿಸಿದ್ದೆ ಕಾಂಗ್ರೆಸ್ ಎಂದು ಸ್ಫೋಟಕ ವಿಚಾರ ತಿಳಿಸಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳುಹಿಸಿದ್ದರು. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ದೆವು. ಈ ಬಾರಿ ಅವರಿಗೆ ಬಹುಮತ ಇದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದರು ಎಂದು ಜೋಶಿ ಹೇಳಿದ್ದಾರೆ.
ಬಿಜೆಪಿ 100 ಕೋಟಿ ನೀಡಿದ ಆಫರ್‌ ಬಗ್ಗೆ ದಾಖಲೆ ಇದ್ದರೆ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ. ವಿಷಯನ್ನು ಬೇರೆ ಕಡೆಗೆ ತಿರುಗಿಸಲು ಸುಮ್ಮನೆ ಮಾತನಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Click

https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
https://newsnotout.com/2024/11/9-year-old-baby-are-pregnent-kannada-news-iran-viral-video/
https://newsnotout.com/2024/11/ambulance-and-car-clash-issue-kannada-news-viral-video/
https://newsnotout.com/2024/11/hospital-kannada-news-icu-shift-bihar-viral-news/

Related posts

ಶಿವ, ಪಾರ್ವತಿ ಧೂಮಪಾನ ಫೋಟೊ ಶೇರ್ ಮಾಡಿದ ಲೀನಾ

ಹಜಮಾಡಿ: ಸದ್ಯಕ್ಕಿಲ್ಲ ಹೆಚ್ಚುವರಿ ಶುಲ್ಕ ಸಂಗ್ರಹ

ಕೋಳಿ ಮರಿಗಳ ಜತೆಗೆ ನಾಯಿ ಮರಿಗೂ ಆಶ್ರಯ ನೀಡಿದ ತಾಯಿ ಕೋಳಿ