ಕ್ರೈಂಬೆಂಗಳೂರುವೈರಲ್ ನ್ಯೂಸ್

ಹುಟ್ಟುಹಬ್ಬದಂದೇ ತಲ್ವಾರ್ ಹಿಡಿದು ಅಟ್ಟಹಾಸ..! ಮಾಜಿ ಮೇಯರ್ ನ​ ಪುತ್ರನಿಂದ ಹಲ್ಲೆ, ಯುವಕ ಸಾವು..!

ನ್ಯೂಸ್ ನಾಟೌಟ್: ಮಾಜಿ ಮೇಯರ್​ ಪುತ್ರನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಮಾಜಿ ಮೇಯರ್ ನಾಗಮ್ಮನ ಮಗ ರಘು ತನ್ನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಯುವಕನನ್ನು ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದ್ದು, ಮಾರ್ಚ್​ 05ರಂದು ಬಳ್ಳಾರಿಯ ಹುಸೇನ್​ ನಗರದಲ್ಲಿ ಈ ಘಟನೆ ನಡೆದಿತ್ತು. ತಲೆ ಭಾಗಕ್ಕೆ ದೊಣ್ಣೆಯಿಂದ ಜೋರಾಗಿ ಹೊಡೆದಿದ್ದ ಕಾರಣ ತೀವ್ರ ರಕ್ತಸ್ರಾವವಾಗಿತ್ತು ಹೀಗಾಗಿ ಗಾಯಾಳು ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಳ್ಳಾರಿ ಮಾಜಿ ಮೇಯರ್​ ನಾಗಮಮ್ಮ ಅವರ ಪುತ್ರ ರಘು ತನ್ನ ಹುಟ್ಟುಹಬ್ಬದ ಪ್ರಯುಕ್ತ ಹುಸೇನ್ ನಗರದ ತುಂಬಾ ಲೈಟಿಂಗ್​, ಡಿಜೆ ಹಾಕಿಸಿ ಅದ್ದೂರಿಯಾಗಿ ಜನುಮದಿನ ಆಚರಿಸಿಕೊಳ್ಳುತ್ತಿದ್ದ.

ಇದೇ ವೇಳೆ ಯುವಕ ತಿಪ್ಪೇಸ್ವಾಮಿ ತನ್ನ ಸಂಬಂಧಿಕರ ಮನೆಗೆ ಹೋಗಬೇಕು ಎಂದು ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ತನ್ನ ಮನೆಯಿಂದ ಹುಸೇನ್ ನಗರಕ್ಕೆ ಬೈಕ್ ನಲ್ಲಿ ತನ್ನ ಗೆಳೆಯರೊಂದಿಗೆ ಬಂದಿದ್ದಾನೆ. ಈ ವೇಳೆ ದಾರಿ ಮಧ್ಯೆ ರಘು ಆ್ಯಂಡ್ ಟೀಂ ಕೈಯಲ್ಲಿ ತಲ್ವಾರ ಹಿಡಿದು ಕೇಕ್ ಕಟ್ ಮಾಡುತ್ತಾ ಕುಣಿದು ಕುಪ್ಪಳಿಸುತಿದ್ದ ಸಮಯದಲ್ಲಿ ಸ್ವಲ್ಪ ಜಾಗ ಬಿಡಿ ನಾನು ಆ ಕಡೆ ಹೋಗಬೇಕು ಅಂತಾ ರಘು ಆಂಡ್ ಗ್ಯಾಂಗ್‌ಗೆ ಯುವಕ ತಿಪ್ಪೇಸ್ವಾಮಿ ಮನವಿ ಮಾಡಿದ್ದಾನೆ. ದಾರಿ ಬಿಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದಿದ್ದು, ರಘು ಮತ್ತು ಸಂಗಡಿಗರು ತಿಪ್ಪೇಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಆರೋಪಿ ರಘು ಹಾಗೂ ಸಂಗಡಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ ಎಂದ ಅಮೆರಿಕ ಅಧ್ಯಕ್ಷ ಬೈಡನ್..! ನಾವು ಯಾರ ವಿರುದ್ಧವೂ ಅಲ್ಲ ಎಂದು ಉತ್ತರಿಸಿದ ಪ್ರಧಾನಿ ಮೋದಿ

ಹನುಮಾನ್ ಚಾಲೀಸಾ ಪಠಿಸಿ, ರೂ.10 ಕಾಣಿಕೆ ಇಟ್ಟು, ಅದೇ ಡಬ್ಬಿಯಿಂದ 5 ಸಾವಿರ ರೂ. ಕದ್ದ ಕಳ್ಳ..! ಇಲ್ಲಿದೆ ಕಳ್‌ ಭಕ್ತನ ಕೈಚಳಕದ ವಿಡಿಯೋ

ರಾಜ್ಯಾದ್ಯಂತ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ: ರಾಮಲಿಂಗಾ ರೆಡ್ಡಿ