ಕ್ರೈಂವೈರಲ್ ನ್ಯೂಸ್

279 ರೂಪಾಯಿ ಬಿರಿಯಾನಿ ತಿಂದು 7 ಲಕ್ಷದ ಕಾರು ಗೆದ್ದದ್ದು ಹೇಗೆ..? ಇಲ್ಲಿದೆ ಅದೃಷ್ಟಶಾಲಿಯ ಇಂಟ್ರೆಸ್ಟಿಂಗ್ ಸ್ಟೋರಿ

ನ್ಯೂಸ್ ನಾಟೌಟ್: ರೆಸ್ಟೋರೆಂಟ್​ ಒಂದರಲ್ಲಿ 279ರೂಪಾಯಿ ಬಿರಿಯಾನಿ ತಿಂದಿದ್ದ ವ್ಯಕ್ತಿಯೊಬ್ಬ ಏಳು ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಗೆದ್ದು ಅದೃಷ್ಟವಂತ ಎನಿಸಿಕೊಂಡ ಘಟನೆ ನಡೆದಿದೆ.

ಮುಂಬೈನ ತಿರುಪತಿ ನಗರದ ರೋಬೋ ಹೋಟೆಲ್ ನಲ್ಲಿ ನಡೆದ ಬಿರಿಯಾನಿ ಲಕ್ಕಿ ಡ್ರಾದಲ್ಲಿ ರಾಹುಲ್ ಎಂಬ ವ್ಯಕ್ತಿ ಉಚಿತವಾಗಿ ನಿಸ್ಸಾನ್ ಮ್ಯಾಗ್ನೇಟ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ತಿರುಪತಿಯ ರೋಬೋ ಹೋಟೆಲ್ ಕಳೆದ ಸೆಪ್ಟೆಂಬರ್​ನಲ್ಲಿ ವಿನೂತನ ಯೋಜನೆಯನ್ನು ಪರಿಚಯಿಸಿತ್ತು.

ಹೋಟೆಲ್​ನಲ್ಲಿ ಬಿರಿಯಾನಿ ತಿಂದ ಎಲ್ಲರಿಗೂ ಕೂಪನ್ ನೀಡಲಾಗಿತ್ತು. ಸುಮಾರು 23 ಸಾವಿರಕ್ಕೂ ಹೆಚ್ಚು ಕೂಪನ್ ಸಂಗ್ರಹಿಸಲಾಗಿತ್ತು. ಹೊಸ ವರ್ಷದ ಸಂಭ್ರಮದಲ್ಲಿ ಭಾನುವಾರ ಡಿ.೩೧ರ ರಾತ್ರಿ ಹೋಟೆಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಟೆಲ್ ಮುಖ್ಯಸ್ಥ ಭರತ್ ಕುಮಾರ್ ರೆಡ್ಡಿ ಮತ್ತು ನೀಲಿಮಾ ದಂಪತಿ ಕೂಪನ್ ತೆಗೆದಿದ್ದರು.

ತಿರುಪತಿಯ ರಾಹುಲ್ ಈ ಕೂಪನ್ ನಲ್ಲಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದರು. ಹೊಸ ವರ್ಷದ ಮೊದಲ ದಿನವನ್ನ ನಿಸ್ಸಾನ್ ಮ್ಯಾಗ್ನೆಟ್ ಕಾರು ಗೆಲ್ಲುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಹೋಟೆಲ್ ಮುಖ್ಯಸ್ಥರೇ ರಾಹುಲ್​ಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಈಗಾಗಲೇ ಕಾರನ್ನು ರಾಹುಲ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

https://newsnotout.com/2024/01/student-and-perents-news-issue/

Related posts

ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಆಲಂಗಿಸಿದ ಪೊಲೀಸ್ ಅಧಿಕಾರಿ..! ಅಮಾನತ್ತುಗೊಳಿಸಿದ ಪೊಲೀಸ್ ಆಯುಕ್ತರು, ಇಲ್ಲಿದೆ ವಿಡಿಯೋ

Challenging Star Darshan arrested: ದರ್ಶನ್ ಅರೆಸ್ಟ್ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ಎಕ್ಸ್‌ಟರ್‌ SUV ಕಾರು ಮಾರುಕಟ್ಟೆಗೆ, ಕಾರು ಖರೀದಿಸುವ ಮಧ್ಯಮ ವರ್ಗದ ಕನಸು ನನಸಾಗುವತ್ತ ಸಾಗುವುದೇ?