ಕರಾವಳಿವೈರಲ್ ನ್ಯೂಸ್

ಇಂದು ಬಿರಿಯಾನಿ ಡೇ..! ಕಳೆದ 12 ತಿಂಗಳಲ್ಲಿ ಭಾರತೀಯರಿಂದ ಕೇವಲ ಒಂದು ಸಂಸ್ಥೆಯ ಮೂಲಕ 7.6 ಕೋಟಿ ಬಿರಿಯಾನಿ ಆರ್ಡರ್‌ ..! ಕರ್ನಾಟಕದ ಈ ನಗರಕ್ಕೆ ಮೊದಲ ಸ್ಥಾನ!

209

ನ್ಯೂಸ್ ನಾಟೌಟ್ : ಇಂದು ಬಿರಿಯಾನಿ ಡೇ, ಪ್ರತೀ ವರ್ಷದ ಜುಲೈ ತಿಂಗಳ ಮೊದಲ ಬಾನುವಾರದಂದು ವಿಶ್ವ ಬಿರಿಯಾನಿ ದಿನ ಆಚರಿಸಲಾಗುತ್ತಿದೆ.12 ತಿಂಗಳಲ್ಲಿ ಭಾರತೀಯರು 7.6 ಕೋಟಿ ಬಿರಿಯಾನಿ ಆರ್ಡರ್‌ಗಳನ್ನು ಮಾಡಿದ್ದಾರೆ, ಇದು ಕೇವಲ ಒಂದು ಸಂಸ್ಥೆ ಬಿಚ್ಚಿಟ್ಟ ಅಂಕಿ-ಅಂಶ, ಇದನ್ನು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಮಾಹಿತಿ ನೀಡಿದೆ.

ಪ್ರತಿ ವರ್ಷ ಜುಲೈ 2 ರಂದು ಅಂತಾರಾಷ್ಟ್ರೀಯ ಬಿರಿಯಾನಿ ದಿನ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಸ್ವಿಗ್ಗಿ ಭಾರತೀಯರ ಬಿರಿಯಾನಿ ಪ್ರೀತಿಯ ಬಗ್ಗೆ ವಿಶೇಷ ಮಾಹಿತಿ ನೀಡಿದೆ.
ಸ್ವಿಗ್ಗಿ ಕಂಪನಿಯ ಪ್ರಕಾರ, ದೇಶದಾದ್ಯಂತ ಜನರು ಪ್ರತಿ ನಿಮಿಷಕ್ಕೆ 219 ಬಿರಿಯಾನಿಗಳನ್ನು ಆರ್ಡರ್‌ ಮಾಡಿದ್ದಾರೆ. ಸುಗಂಧಭರಿತ ‘ಲಕ್ನೋವಿ ಬಿರಿಯಾನಿ’ಯಿಂದ ಮಸಾಲೆಯುಕ್ತ ‘ಹೈದರಬಾದಿ ದಮ್ ಬಿರಿಯಾನಿ’ ಮತ್ತು ಸುವಾಸನೆಯ ‘ಕೋಲ್ಕತ್ತಾ ಬಿರಿಯಾನಿ’ಯಿಂದ ಪರಿಮಳಯುಕ್ತ ‘ಮಲಬಾರ್ ಬಿರಿಯಾನಿ’ವರೆಗೆ ಹಲವಾರು ರೀತಿಯ ಬಿರಿಯಾನಿಗಳನ್ನು ಭಾರತೀಯರು ಆರ್ಡರ್ ಮಾಡಿದ್ದಾರೆ.

ಸ್ವಿಗ್ಗಿಯ ಆರ್ಡರ್ ವಿಶ್ಲೇಷಣೆಯು 2023 ರ ಕಳೆದ 5 ತಿಂಗಳಲ್ಲಿ, 2022 ರ ಇದೇ ಅವಧಿಗೆ ಹೋಲಿಸಿದರೆ ಬಿರಿಯಾನಿ ಆರ್ಡರ್‌ಗಳಲ್ಲಿ ಶೇಕಡಾ 8.26 ರಷ್ಟು ಬೆಳವಣಿಗೆಯಾಗಿದೆ. ದೇಶಾದ್ಯಂತ 2.6 ಲಕ್ಷಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳು ಸ್ವಿಗ್ಗಿ ಮೂಲಕ ಬಿರಿಯಾನಿಯನ್ನು ನೀಡಿದರೆ, ಅವುಗಳಲ್ಲಿ 28 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೇವಲ ಬಿರಿಯಾನಿ ತಯಾರಿಸುವುದರಲ್ಲಿಯೇ ಪರಿಣತಿ ಪಡೆದಿವೆ.

ಅತ್ಯಧಿಕ ಬಿರಿಯಾನಿ ಯಾವ ನಗರದಲ್ಲಿವೆ ಎಂದು ನೋಡಿದರೆ, ಬೆಂಗಳೂರು ಸುಮಾರು 24 ಸಾವಿರ ಬಿರಿಯಾನಿ ಸರ್ವಿಂಗ್ ರೆಸ್ಟೋರೆಂಟ್‌ಗಳೊಂದಿಗೆ ಮುಂಚೂಣಿಯಲ್ಲಿದೆ. ಮುಂಬೈ 22 ಸಾವಿರ ಮತ್ತು ದೆಹಲಿ 20 ಸಾವಿರಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್​ಗಳನ್ನು ಸ್ವಿಗ್ಗಿಯಲ್ಲಿ ಹೊಂದಿವೆ.

See also  ಹುಡುಗಿಗಾಗಿ ಮನೆ ಮೇಲೆ ಯುವಕರ ದಾಳಿ..! ತಡರಾತ್ರಿ ಮನೆ, ವಾಹನಗಳ ಮೇಲೆ ಕಲ್ಲು ತೂರಾಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget