ಕ್ರೈಂವೈರಲ್ ನ್ಯೂಸ್

ಬಿರಿಯಾನಿ ಪ್ರಿಯರೇ ಹುಷಾರ್..ಚಿಕನ್ ಕೇಳಿದ್ರೆ ಇಲ್ಲಿ ಬೌಬೌ ಬಿರಿಯಾನಿ ತಿನ್ನಿಸ್ತಾರೆ ಎಚ್ಚರ..!

265

ನ್ಯೂಸ್ ನಾಟೌಟ್: ರೆಸ್ಟೊರೆಂಟ್ ಆಹಾರ ಪ್ರಿಯರೇ ಎಚ್ಚರ. ನೀವು ಭೇಟಿ ನೀಡುವ ರೆಸ್ಟೊರೆಂಟ್ ನಲ್ಲೂ ತಯಾರಾಗಬಹುದು ಬೌಬೌ ಬಿರಿಯಾನಿ. ಇದಕ್ಕೆ ಸಾಕ್ಷಿ ಎಂಬಂತಿದೆ ಇತ್ತೀಚೆಗೆ ವಿಚಿತ್ರ ಆಹಾರ ದಂಧೆಯೊಂದು ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಬೌಬೌ ಬಿರಿಯಾನಿ ದಂಧೆ ಜೂನ್ 23 ಕ್ಕೆ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರದ ಪ್ರಭುಶಂಕರ ಬಿಲ್ಡಿಂಗ್ ನಲ್ಲಿದ್ದ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಪ್ರಕರಣ ಬೆಳಕಿಗೆ ಬಂದಿದೆ. ದಾಳಿ ವೇಳೆ ರೆಸ್ಟೊರೆಂಟ್ ನಲ್ಲಿ ನಾಯಿ ಮಾಂಸ ಹಾಗೂ ಕೊಳೆತ ಕೋಳಿ ಮಾಂಸ ಪತ್ತೆಯಾಗಿದೆ. ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ರೆಸ್ಟೊರೆಂಟ್ ಗೆ ಬೀಗಮುದ್ರೆ ಜಡಿದಿದ್ದಾರೆ ಎಂದು ವರದಿ ತಿಳಿಸಿದೆ.

ಇನ್ನೂ ಪ್ರತಿಷ್ಠಿತ ಹೋಟೆಲ್‌ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್‌ ಹಿಡಿದ ನಾನ್‌ ವೆಜ್‌ ನೋಡಿ ಶಾಕ್ ಆಗಿದ್ದಾರೆ. ಮಾಲೀಕರಿಗೆ ದಂಡ ವಿಧಿಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಹಸೀಲ್ದಾರ್‌ ಸಂತೋಷ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ, ಪುರಸಭೆ ಆರೋಗ್ಯಾಧಿಕಾರಿಗಳು ಇದ್ದರು ಎನ್ನಲಾಗಿದೆ.

See also  ಭಾರತ-ಪಾಕ್ ಉದ್ವಿಗ್ನತೆಯ ಮಧ್ಯೆ ಪಾಕ್ ಮಸೀದಿಯಲ್ಲಿ ಧರ್ಮಗುರುವಿನ ಭಾಷಣದ ವಿಡಿಯೋ ವೈರಲ್..! ಭಾರತದ ಪರ ನಿಂತ ಪಾಕ್ ಪ್ರಜೆಗಳು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget