ನ್ಯೂಸ್ ನಾಟೌಟ್: ಯುಪಿಐ ವ್ಯವಸ್ಥೆಯ ಪೇಮೆಂಟ್ ಆ್ಯಪ್ ಆಗಿರುವ ಗೂಗಲ್ ಪೇ, ಸೌಕರ್ಯ ಶುಲ್ಕ (ಕನ್ವೀನಿ ಯನ್ಸ್ ಫೀ)ವನ್ನು ವಿಧಿಸಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಗೂಗಲ್ ಪೇ ಬಳಸಿ ಎಲೆಕ್ಟ್ರಿಕ್ ಬಿಲ್ ಅಥವಾ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಿದರೆ ಶೇ.0.5ರಿಂದ ಶೇ.1ರಷ್ಟು ಸೌಕರ್ಯ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಪ್ರತ್ಯೇಕ ಜಿಎಸ್‌ಟಿಯೂ ಸೇರಿರುತ್ತದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕುಂಭಮೇಳಕ್ಕೆ ಹೋಗಿದ್ದ ಕರ್ನಾಟಕ ಮೂಲದ 6 ಮಂದಿ ಸಾವು..! ಒಂದೇ ಗಾಡಿಯಲ್ಲಿ ತೆರಳಿದ್ದ 12 ಜನ..!
ಈಗಾಗಲೇ ಮೊಬೈಲ್ ರೀಚಾರ್ಜ್‌ಗಳ ಮೇಲೆ ಗೂಗಲ್ ಪೇ 3 ರೂ. ಸೌಕರ್ಯ ಶುಲ್ಕವನ್ನು ವಿಧಿಸುತ್ತಿದೆ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಮಾಡಲಾಗುವ ಪೇಮೆಂಟ್ ಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಕ್ರೆಡಿಟ್ ಕಾರ್ಡ್ ಬಳಸಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ 15 ರೂ. ವರೆಗೂ ಸೌಕರ್ಯ ಶುಲ್ಕವನ್ನು ಪಾವತಿಸಬೇಕಾದ ಸಾಧ್ಯತೆ ಇದೆ ಎನ್ನಲಾಗಿದೆ.