Latestಕ್ರೈಂಬೆಂಗಳೂರು

ಸಾಲು ಸಾಲಾಗಿ ಬೈಕ್‌ ಗಳಲ್ಲಿ ಲಾಂಗ್ ಹಿಡಿದು ಸವಾರಿ..! ಮಧ್ಯರಾತ್ರಿ ಮಾರಕಾಸ್ತ್ರಗಳ ಜೊತೆ ಬೈಕ್ ವ್ಹೀಲಿಂಗ್..!

921

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ.

ಬೆಂಗಳೂರಿನ ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ ಗಳಲ್ಲಿ ಲಾಂಗ್ ಹಿಡಿದು, ವಾಹನ ಸವಾರರಿಗೆ ಭಯ ಬೀಳಿಸುತ್ತಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಬೈಕ್ ಚಲಾಯಿಸುತ್ತಿದ್ದಾರೆ.

ಪುಂಡರ ಗುಂಪೊಂದು ಹವಾ ಮೆಂಟೇನ್ ಮಾಡುವುದಕ್ಕೆ ಭಯಬೀಳಿಸುವಂತೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್‌ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ರಸ್ತೆಯಲ್ಲಿ ಬೆಂಕಿ ಬರುವಂತೆ ಕತ್ತಿ ಹಾಗೂ ಲಾಂಗ್‌ನಿಂದ ಬೀಸುತ್ತಿದ್ದು, ಪುಂಡರ ಹಾವಳಿಗೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

See also  ಮೊಟ್ಟೆ ತಿನ್ನುತ್ತಾ, ಎಣ್ಣೆ ಹೊಡೆಯುತ್ತಾ ಮೆಟ್ರೋದಲ್ಲಿ ಹುಚ್ಚಾಟ..! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget