ಕರಾವಳಿಕ್ರೈಂ

ದ್ವಿಚಕ್ರ ವಾಹನ ಕದಿಯುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು, ಕಳವುಗೈದ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಸಿಕ್ಕಿ ಬಿದ್ದದ್ದು ಹೇಗೆ..?

301

ನ್ಯೂಸ್‌ ನಾಟೌಟ್‌: ಮಂಗಳೂರಿನಲ್ಲಿ ಪಾರ್ಕ್‌ ಮಾಡಿದ್ದ ದ್ವಿ ಚಕ್ರ ವಾಹನಗಳನ್ನು ಕದಿಯುತ್ತಿದ್ದ ಖದೀಮನೋರ್ವ ಮಂಗಳೂರು ಪೂರ್ವ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯನ್ನು ಉಳ್ಳಾಲ ಕಾಫಿಕಾಡ್ 1ನೇ ಕ್ರಾಸ್‌ನ ಶನೀಝ್ ( 23 ) ಎಂದು ಗುರುತಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಕಳವು ಮಾಡಿದ ದ್ವಿಚಕ್ರ ವಾಹನದಲ್ಲಿ ನಂಬರ್‌ಪ್ಲೇಟ್‌ ತೆಗೆದು ಸಂಚರಿಸುತ್ತಿದ್ದಾಗ ಪಂಪ್‌ವೆಲ್‌ ಬ್ರಿಡ್ಜ್‌ ಸಮೀಪ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಲ್ಲಿದ್ದ ಕಳವುಗೈದ ಸ್ಕೂಟರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿ ಈ ಹಿಂದೆ ಕಳವುಗೈದ ಹೋಂಡಾ ಆಕ್ಟಿವಾ ಸ್ಕೂಟರನ್ನೂ ಪೊಲೀಸರು ಸ್ವಾಧೀನಪಡಿಸಿದ್ದಾರೆ.

ಬಂಧಿತನಿಂದ ಒಟ್ಟು ಅಂದಾಜು ಒಂದು ಲಕ್ಷ ಹತ್ತು ಸಾವಿರ ಬೆಲೆ ಬಾಳುವ 2 ದ್ವಿ ಚಕ್ರ ವಾಹನಗಳನ್ನು ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವಶಪಡಿಸಿದ್ದಾರೆ.

See also  ತನ್ನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ಕುಸಿದು ಬಿದ್ದು ಸಾವು..! ಈ ಬಗ್ಗೆ ವೈದ್ಯರು ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget