ಕರಾವಳಿಕ್ರೈಂ

ಮಂಗಳೂರು: ಕಳವುಗೈದ ಬೈಕ್ ನಲ್ಲಿ ಜಾಲಿ ರೈಡ್! ಸಿಕ್ಕಿಬಿದ್ದ ಕಳ್ಳರು!

264

ನ್ಯೂಸ್ ನಾಟೌಟ್: ಕಳ್ಳತನ ಮಾಡಿದ್ದಲ್ಲದೇ ಅದೇ ಬೈಕ್ ನಲ್ಲಿ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಫಾರಿಶ್ ಶರ್ಮಾ(19), ಧನುಷ್ (20) ಬಂಧಿತ ಆರೋಪಿಗಳಾಗಿದ್ದು, ಯಮಹಾ ಅರ್ ಎಕ್ಸ್ , ಬಜಾಜ್ ಪಲ್ಸರ್ ಬೈಕ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ( 28 ರಂದು) ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್ ಸವಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಶಯಸ್ಪದವಾಗಿ ಕಂಡು ಬಂದ ಬಗ್ಗೆ ಅವರನ್ನು ತಡೆದು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಈ ಎರಡು ಬೈಕ್ ಗಳು ಈ ಹಿಂದೆ ಮಂಗಳೂರು ನಗರದ ಪಂಪ್ವಲ್ ನ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಅರ್ ಎಕ್ಸ್ ಬೈಕ್ ಹಾಗೂ ವಲೇನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ ಗಳೆಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಲ್ಲಿ ಫಾರಿಶ್ ಶರ್ಮಾ ವಿರುದ್ದ 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿದೆ. ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ ಅಂಶುಕುಮಾರ್, ಉಪ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಮಂಗಳೂರು ಕೇಂದ್ರ ವಿಭಾಗ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

See also  ಟಿಕೆಟ್‌ ದರ ಏರಿಸದಿದ್ದರೆ KSRTC ಸಂಸ್ಥೆ ಉಳಿಯಲ್ಲ ಎಂದ ನಿಗಮದ ಅಧ್ಯಕ್ಷ..! ದರ ಹೆಚ್ಚಳ ಪುರುಷರಿಗೆ ಮಾತ್ರವಾ..? ಶಾಸಕ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget