ಕರಾವಳಿಸುಳ್ಯ

ಸುಳ್ಯದಲ್ಲಿ ಹಿಟ್ ಆ್ಯಂಡ್ ರನ್, ಬೈಕ್ ಸವಾರನಿಗೆ ಗಾಯ

63
Spread the love

ನ್ಯೂಸ್ ನಾಟೌಟ್ : ಬೈಕ್ ಮತ್ತು ಕಾರು ಡಿಕ್ಕಿಯಾಗಿದ್ದು ಕಾರನ್ನು ನಿಲ್ಲಿಸದೆ ಪರಾರಿಯಾದ ಘಟನೆ ಸುಳ್ಯದ ಪೈಚಾರ್ ಜಂಕ್ಷನ್ ಬಳಿ ನಡೆದಿದೆ. ಬೈಕ್ ಸವಾರನಿಗೆ ಗಾಯವಾಗಿದ್ದುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಕೋಲ್ಚಾರು ನಿವಾಸಿ ಪ್ರಸನ್ನ ಕುಮಾರ್ ಎಂಬುವವರು ಗಾಯಗೊಂಡ ಬೈಕ್ ಸವಾರ.ಇವರು ಪೈಚಾರಿನಿಂದ ಸುಳ್ಯಕ್ಕೆ ಬರುತ್ತಿರುವಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಬಿಳಿ ಬಣ್ಣದ ಶಿಫ್ಟ್ ಕಾರು ಬೈಕ್‌ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ಪ್ರಸನ್ನ ಕುಮಾರ್ ರಸ್ತೆಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಸುಳ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ಬಳಿಕ ಘಟನೆಯ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

See also  ಸುಳ್ಯ:ಸರ್ದಾರ್ ವಲ್ಲಭಭಾಯಿ ಪಟೇಲ್​ ಜನ್ಮದಿನ:ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ
  Ad Widget   Ad Widget   Ad Widget