ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ರಕ್ಷಾ ಎಂಬ 3 ವರ್ಷದ ಹೆಣ್ಣು ಸಾವನ್ನಪ್ಪಿರುವ ಘಟನೆ ಮಾರ್ಚ್ 22 ಬೆಂಗಳೂರಿನ ರಾತ್ರಿ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ.
ಮೂರು ವರ್ಷದ ರಕ್ಷಾ ತನ್ನ ತಂದೆ ಸತ್ಯ ಎಂಬವರ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಗಾಳಿ ಮಳೆಗೆ ರಸ್ತೆ ಬದಿ ಮರ ಬಿದ್ದಿದೆ. ಪರಿಣಾಮ ಬೈಕ್ ನಲ್ಲಿ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆ ಮೇಲೆಯೇ ಮರದ ತುಂಡು ಬಿದ್ದು ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾಳೆ. ಕಮ್ಮನಹಳ್ಳಿ ಬಳಿಯ ಕುಳ್ಳಪ್ಪ ಸರ್ಕಲ್ ನಿವಾಸಿಗಳಾದ ಶಕ್ತಿ ಮತ್ತು ಸತ್ಯ ದಂಪತಿಯ 3ವರ್ಷದ ಮಗು ರಕ್ಷಾ ಪ್ರಾಣಕಳೆದುಕೊಂಡ ಬಾಲಕಿ ಎಂದು ಗುರುತಿಸಲಾಗಿದೆ.
ತಂದೆ ಜೊತೆಗೆ ಮಾವ ಮುರುಳಿ ಮನೆಗೆ ಬೈಕ್ ನಲ್ಲಿ ಬಂದಿದ್ದ ಮಗು ವಾಪಸ್ ಮನೆಗೆ ಹೊಗುತ್ತಿದ್ದ ವೇಳೆ ಜೀವನಹಳ್ಳಿ ರಸ್ತೆಯಲ್ಲಿದ್ದ ಹೊಂಗೆ ಮರ ಬುಡಸಮೇತ ಬೈಕ್ ಮೇಲೆ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ರಕ್ಷಾ ತಲೆಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತ ಸ್ರಾವವಾಗಿದೆ. ಕೂಡಲೇ ರಕ್ಷಾಳನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ ನಿಂದ ಸುಟ್ಟ ನೋಟಿನ ಕಂತೆಗಳ ವಿಡಿಯೋ ಬಿಡುಗಡೆ..! ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆ..!
ಇನ್ನೂ ಬೌರಿಂಗ್ ಆಸ್ಪತ್ರೆಯ ಬಳಿ ಮಗುವನ್ನ ಕಳೆದು ಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಡಿದೆ.