ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಐವರ್ನಾಡು: ಹಠಾತ್ ಕಾಡು ಹಂದಿ ಅಡ್ಡ ಬಂದು ಬೈಕ್ ಪಲ್ಟಿ..! ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯ, ನಿನ್ನೆ ರಾತ್ರಿ ನಡೆದಿದ್ದೇನು..?

237

ನ್ಯೂಸ್ ನಾಟೌಟ್: ಕಾಡು ಹಂದಿಯೊಂದು ಹಠಾತ್ ರಸ್ತೆ ದಾಟಿದ್ದರಿಂದ ಬೈಕ್ ಸವಾರನೊಬ್ಬ ರಸ್ತೆಗೆ ಎಸೆಯಲ್ಪಟ್ಟ ಘಟನೆ ನಿನ್ನೆ (ಜೂ.8) ತಡರಾತ್ರಿ ಸುಳ್ಯದ ಐವರ್ನಾಡು ಸಮೀಪದ ಬೇಂಗಮಲೆ ಬಳಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದಾರೆ.

ತಕ್ಷಣ ಅವರ ಹಿಂದಿನಿಂದ ಬರುತ್ತಿದ್ದ ವಾಹನ ಸವಾರರು ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆ, ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಹಾವಳಿ ರೈತರಿಗೆ ಹೆಚ್ಚುತ್ತಿದೆ. ಇದೀಗ ವಾಹನ ಸವಾರರು ಕೂಡ ಕಾಡು ಮೃಗಗಳ ದಾಳಿಗೆ ಸಿಲುಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.

Click 👇

https://newsnotout.com/2024/06/narendra-modi-oath-taking-invited-to-pejawar-shri
https://newsnotout.com/2024/06/the-python-issue-in-indonesia-kannada-news-women
https://newsnotout.com/2024/06/annamalai-becomes-mp-even-he-lost-in-election
See also  4 ವರ್ಷದಿಂದ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ..! ಪಕ್ಕದ ಮನೆಯವರ ಸಹಾಯದಿಂದ ರಹಸ್ಯ ಬಯಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget