ಕ್ರೈಂಬೆಂಗಳೂರುವೈರಲ್ ನ್ಯೂಸ್

ಬೈಕ್ ಗೆ ಗುದ್ದಿದರೂ ಮಾನವೀಯತೆ ತೊರಲಿಲ್ಲವೇ ಕಾಮಿಡಿ ಸ್ಟಾರ್ ಚಂದ್ರಪ್ರಭ! ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಈ ಕಲಾವಿದನ ಮೇಲೆ ‘ಹಿಟ್ ಆ್ಯಂಡ್ ರನ್ ಕೇಸ್’!

ನ್ಯೂಸ್ ನಾಟೌಟ್: ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಚಂದ್ರಪ್ರಭ ಜಿ. ಈಗ ವಿವಾದಕ್ಕೆ ಸಿಲುಕಿದ್ದಾರೆ. ಹಿಟ್ ಆ್ಯಂಡ್ ರನ್ ಕೇಸ್​ನಲ್ಲಿ ಚಂದ್ರಪ್ರಭಗೆ ಸೇರಿದ ಕಾರು ಬಳಕೆ ಆಗಿದೆ ಎನ್ನಲಾಗಿದ್ದು. ವೃತ್ತಿಯಲ್ಲಿ ಕಲಾವಿದ ಆಗಿರುವ ಚಂದ್ರಪ್ರಭ ಮಾನವೀಯತೆ ತೋರಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಪ* ಘಾತದಲ್ಲಿ ಬೈಕ್ ಒಂದಕ್ಕೆ ಕಾರು ಗುದ್ದಿದೆ ಮತ್ತು ಬೈ ಸವಾರನಿಗೆ ಗಾಯಗಳಾದರೂ ನೋಡದೆ ಕಾರ್ ಚಾಲಕ ಪರಾರಿಯಾಗಿದ್ದಾನೆ. ಆದರೆ ಈ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಇದು ಚಂದ್ರಪ್ರಭ ಕಾರು ಎನ್ನಲಾಗಿದೆ. ಅವರೇ ಕಾರು ಚಲಾಯಿಸುತ್ತಿದ್ದರೇ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್​​ನಲ್ಲಿ ಬರುತ್ತಿದ್ದ ವೇಳೆ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆಯುವ ಸಂದರ್ಭದಲ್ಲಿ ಚಂದ್ರಪ್ರಭ ಅವರೇ ಕಾರು ಓಡಿಸುತ್ತಿದ್ದರೋ ಅಥವಾ ಬೇರೆಯವರು ಈ ಕಾರನ್ನು ತೆಗೆದುಕೊಂಡು ಹೋಗಿದ್ದರೋ ಎನ್ನುವ ಮಾಹಿತಿ ದೊರೆತಿಲ್ಲ.

Related posts

ಮದುವೆಗೆ ಒಪ್ಪದ ಪ್ರಿಯಕರನ ಮೇಲೆ ಆಸಿಡ್ ಎರಚಿದ ಯುವತಿ..!

ಆಸ್ಪತ್ರೆಯಲ್ಲಿ ಮೃತವೆಂದು ಘೋಷಿಸಿದ ಬಿಜೆಪಿ ನಾಯಕನನ್ನು ಮನೆಗೆ ತರುತ್ತಿದ್ದಂತೆ ಎದ್ದು ಕುಳಿತದ್ದು ಹೇಗೆ? ಆ ಆಸ್ಪತ್ರೆ ಯಾವುದು? ಯಾರು ಆ ಬಿಜೆಪಿ ನಾಯಕ?

60 ಮಂದಿಯಿಂದ ಏಕಾಏಕಿ ಪೊಲೀಸ್ ಠಾಣೆಯೊಳಗೆ ದಾಳಿ! ಸಹಚರರನ್ನು ಲಾಕ್‌ಅಪ್‌ನಿಂದ ಬಿಡಿಸಲು ಪ್ಲಾನ್! ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ