ಸುಳ್ಯ

ಸುಳ್ಯ: ಬಾಂಜಿಕೋಡಿಯಲ್ಲಿ ಕಾರು ಬೈಕ್‌ ನಡುವೆ ಅಪಘಾತ, ಬೈಕ್‌ನಲ್ಲಿದ್ದ ದಂಪತಿಗೆ ಗಾಯ

ನ್ಯೂಸ್‌ ನಾಟೌಟ್‌: ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಸುಳ್ಯ ಖಾಸಗಿ ಸಂಸ್ಥೆಯ ಉದ್ಯೋಗಿ ಅಯ್ಯನಕಟ್ಟೆ ನಿವಾಸಿ ಪ್ರಶಾಂತ್ ಮತ್ತು ಪತ್ನಿ ಎಂದು ತಿಳಿದು ಬಂದಿದೆ.

ಪ್ರಶಾಂತ್‌ ಅವರು ಪತ್ನಿಯೊಂದಿಗೆ ಬೈಕ್ ನಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಬಾಂಜಿಕೋಡಿ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದ ಬೈಕ್‌ ಸವಾರ ಪ್ರಶಾಂತ್ ಅವರ ಕಾಲಿಗೆ ಗಾಯವಾಗಿದೆ. ಜತೆಗೆ ಹಿಂಬದಿಯಲ್ಲಿದ್ದ ಅವರ ಪತ್ನಿಯೂ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಅಪಘಾತಗೊಂಡ ಕಾರಿನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Related posts

ಮೊಳಗಿದ ‘ಅಮರ ಸುಳ್ಯದ ಸಂಗ್ರಾಮ’ದ ಕಹಳೆ, 1837ರ ಇತಿಹಾಸದ ಸುತ್ತಲಿನ ಬೆಳಕು ಚೆಲ್ಲುವ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಸುಳ್ಯ: ಸೋನ ಅಡ್ಕಾರ್ ಗೆ ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಬಹುಮುಖ ಪ್ರತಿಭೆಯ ಮುಡಿಗೆ ಮತ್ತೊಂದು ಗೌರವ

ಅಮರ ಸಂಘಟನಾ ಸಮಿತಿ ಸುಳ್ಯ; ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ