ಕ್ರೈಂವೈರಲ್ ನ್ಯೂಸ್

ಅಪ್ರಾಪ್ತ ಪುತ್ರನಿಗೆ ಬೈಕ್ ನೀಡಿದ ತಂದೆಗೆ ₹25 ಸಾವಿರ ದಂಡ..! ಒಂದು ದಿನದ ಕಠಿಣ ಸಜೆ

240

ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕನಿಗೆ ಬೈಕ್ ರೈಡಿಂಗ್ ಮಾಡುವುದಕ್ಕೆ ನೀಡಿದ ತಂದೆಗೆ ನ್ಯಾಯಾಲಯ ₹ 25 ಸಾವಿರ ದಂಡ ಮತ್ತು ಒಂದು ದಿನ ನ್ಯಾಯಾಲಯದ ಕಾರ್ಯಾಕಲಾಪ ನಡೆಯುವವರೆಗೆ ಸಜೆಯನ್ನೂ ನೀಡಿದೆ.

ಕಾಸರಗೋಡಿನಲ್ಲಿ ಘಟನೆ ನಡೆದಿದೆ. ಇನ್ನೂ ಅಪ್ರಾಪ್ತ 16 ವರ್ಷದ ಬಾಲಕನಿಗೆ ಬೈಕ್ ನೀಡಿದ ಆರೋಪಿ, ನಾರ್ಥ್‌ ತ್ರಕರಿಪುರ ತಂಗಯಂ ನಿವಾಸಿ ಶಾಹಿದ್ ಅನ್ಸಾರಿ ಎಂಬುವರಿಗೆ ದಂಡ ವಿಧಿಸಲಾಗಿದೆ.

2021ರ ನ.14ರಂದು ತ್ರಿಕರಿಪುರ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಬಾಲಕ ಸಿಕ್ಕಿಬಿದ್ದಿದ್ದ. ಈ ಸಂಬಂಧ ಬೈಕ್ ಮಾಲೀಕ ಅನ್ಸಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸುವುದಕ್ಕೆ ಅವಕಾಶ ಕೊಡಬಾರದು ಅನ್ನುವ ನಿಯಮವಿದೆ. ಕೇರಳದಲ್ಲೂ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಹೀಗಿದ್ದರೂ ಕೆಲವು ಹೆತ್ತವರು ಮಕ್ಕಳಿಗೆ ಬೈಕ್ ನೀಡಿ ಆಪತ್ತು ತಂದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೂ ಇಂತಹ ಹಲವು ಪ್ರಕರಣಗಳು ನಡೆದಿವೆ.

See also  ಪ್ರಜ್ವಲ್ ರೀತಿಯಲ್ಲೇ ಇಂದಲ್ಲ ನಾಳೆ ಸಿದ್ದು, ಪರಮೇಶ್ವರ ವಿಡಿಯೊ ಹೊರಬರಬಹುದು ಎಂದ ಜಾರಕಿಹೊಳಿ..! ಡಿ.ಕೆ.ಶಿ ವಿರುದ್ಧ ಗಂಭೀರ ಆರೋಪ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget