ಕರಾವಳಿ

ಭೀಕರ ಅಪಘಾತ: ಅಣ್ಣ –ತಂಗಿ ಸಾವು, ಹೃದಯವಿದ್ರಾವಕ ಘಟನೆ

ನ್ಯೂಸ್ ನಾಟೌಟ್ : ಸ್ಕೂಟರ್ ಗೆ ಕಾರು ಢಿಕ್ಕಿಯಾಗಿ ಒಂದೇ ಮನೆಯ ಇಬ್ಬರು ಮೃತಪಟ್ಟ ಹೃದಯವಿದ್ರಾಕ ಘಟನೆ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ನಡೆದಿದೆ.

ಬಾಜಿನಡ್ಕದ ದೇವಿಪ್ರಸಾದ್ ಎಂಬವರ ಮಕ್ಕಳಾದ ನಿಶಾಂತ್ ಮತ್ತು ಮೋಕ್ಷಾ ಮೃತರು.

ಇನ್ನೂ ಸಣ್ಣ ವಯಸ್ಸಿನ ಹುಡುಗ ನಿಶಾಂತ್ ತನ್ನ ತಂಗಿ ಮೋಕ್ಷಾಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದ. ಈ ಸಂದರ್ಭದಲ್ಲಿ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿಗೆ ಎಲಿಮಲೆ ಬಳಿ ಮಾರುತಿ 800 ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ನಿಶಾಂತ್‌ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ವೇಳೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದರು.ಗಂಭೀರ ಗಾಯಗೊಂಡಿದ್ದ ಮೋಕ್ಷಾಳನ್ನು ಮಂಗಳೂರಿಗೆ ಕರೆದೊಯ್ಯುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ, ಮೋಕ್ಷಾ 5ನೇ ತರಗತಿಯಲ್ಲಿ ಓದುತ್ತಿದ್ದಳು.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಹಿಂದೂ ಕಾರ್ಯಕರ್ತನ ಹತ್ಯೆ ಆರೋಪಿಗೆ ವಕ್ಫ್​ ಬೋರ್ಡ್​ ಉಪಾಧ್ಯಕ್ಷ ಸ್ಥಾನ

ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ

ಮಡಿಕೇರಿ:ಇನ್ಮುಂದೆ ಕೊಡಗಿನ ಮುಗಿಲುಪೇಟೆಗೆ ಖಾಸಗಿ ಕಾರು, ಜೀಪು ನಿಷೇಧ – ಜಿಲ್ಲಾಧಿಕಾರಿ, ಎಸ್ಪಿ ಸೂಚನೆ