ಕರಾವಳಿಕ್ರೈಂ

ಎರಡು ಬೈಕ್‌ಗಳ ನಡುವೆ ಅಪಘಾತ, ಓರ್ವ ಸಾವು, ಮತ್ತೋರ್ವ ಗಂಭೀರ

ನ್ಯೂಸ್‌ನಾಟೌಟ್‌: ಉಡುಪಿ ಜಿಲ್ಲೆಯ ಶಂಕರಪುರ ಶಿರ್ವ ಮುಖ್ಯ ರಸ್ತೆ ಯ ದುರ್ಗಾನಗರ ಇಂಚರ ಬಸ್ಸು ನಿಲ್ದಾಣದ ಬಳಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದು ಓರ್ವ ಮೃತ ಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ರಾತ್ರಿ (ಜೂ.8 ರ) ನಡೆದಿದೆ.

ಮೃತಪಟ್ಟವನನ್ನು ಶಂಕರಪುರದ ನಿವಾಸಿ ಶಂಕರ ಆಚಾರ್ಯ ಎಂದು ಗುರುತಿಸಲಾಗಿದೆ. ಪಾಂಬೂರಿನ ಕರುಣಾಕರ ಮೂಲ್ಯ ಗಂಭೀರ ಗಾಯಗೊಂಡಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಗಣರಾಜ್ಯೋತ್ಸವ ದಿನದಂದೇ ಪ್ರತಿಭಟನೆ,ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳಿಂದ ಬೀಡಿ, ಗುಟ್ಕಾ ಬೇಕು ಎಂದು ಪ್ರತಿಭಟನೆ..! 70 ಕ್ಕೂ ಹೆಚ್ಚು ಕೈದಿಗಳಿಂದ ಮುಷ್ಕರ..!

ನ್ಯಾಯಾಂಗ ಬಂಧನದ ಅವಧಿ ಇಂದು(ಆ.1) ಅಂತ್ಯ..! ಮತ್ತೆ ದರ್ಶನ್‌ ನನ್ನು ಜೈಲಿಗೆ ಕಳುಹಿಸಲು SIT ಸಕಲ ಸಿದ್ಧತೆ..!