ಕರಾವಳಿಕ್ರೈಂಪುತ್ತೂರುಸುಳ್ಯ

ಬೈಕ್‌ಗಳ ನಡುವೆ ಅಪಘಾತ ಓರ್ವನಿಗೆ ಗಾಯ

388

ನ್ಯೂಸ್ ನಾಟೌಟ್ : ಶಿರಾಡಿ ಗ್ರಾಮದ ಶಿರ್ವತ್ತಡ್ಕದ ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುತ್ತಿದ್ದ ಶಾಲಿ ಎಂಬುವವರು ಸಹ ಸವಾರ ಶಿಂಡೊನೊಂದಿಗೆ ಸಂಚರಿಸುತ್ತಿದ್ದ ಬೈಕ್‌ಗೆ ಮಿತ್ತನಾಜೆ ಎಂಬಲ್ಲಿ (ಕೆಎ 21 ಇಡಿ-0242) ಫೆ.5 ರಂದು ಎದುರಿನಿಂದ ಬರುತ್ತಿದ್ದ ಮುನ್ನಾರ್‌ ಪಾಲಕಾಡ್‌, ಇರುವೇಲ್‌ ಕುನ್ನತ್‌ ಮನೆ ನಿವಾಸಿ ಸಿಜೋ ಜೆ. ಅವರ ಕೆ.ಎ. 21 ಎಲ್‌.-5968 ಸಂಖ್ಯೆಯ ಬೈಕ್‌ ಡಿಕ್ಕಿಯಾಗಿ ಸಹಸವಾರ ರಸ್ತೆಗೆ ಬಿದ್ದು ಕಾಲು, ಪಾದ, ಎಡಕಾಲಿನ ಮೊಣ ಗಂಟಿಗೆ ಗಾಯಗೊಂಡಿತ್ತು. ಸ್ಥಳೀಯರು ತಕ್ಷಣ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಸಂದರ್ಭ ಗಾಯಾಳುವಿನ ಆಸ್ಪತ್ರೆಯ ವೆಚ್ಚ ಭರಿಸುವಂತೆ ತಿಳಿಸಿದ್ದ ಸಿಜೋ ಈಗ ಆಸ್ಪತ್ರೆಯ ವೆಚ್ಚ ಭರಿಸಲು ನಿರಾಕರಿಸಿರುವುದರಿಂದ ಮಂಗಳವಾರ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

See also  ಬಿಜೆಪಿ ಶಾಸಕನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ..! ಎಸ್​ಟಿ ಸೋಮಶೇಖರ್ ವಿರುದ್ಧ ಕಾನೂನು ಕ್ರಮ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget